ಬೆಂಗಳೂರು: ಸರಕಾರ ಕೊಟ್ಟಟ ಭಾಷಣ ಓದಲು ನಿರಾಕರಿಸಿದ ರಾಜ್ಯಪಾಲರು ಮೂರೇ ಲೈನಲ್ಲಿ ಭಾಷಣ ಮುಗಿಸಿದ ಪ್ರಸಂಗ ಅಧಿವೇಶನದಲ್ಲಿ ನಡೆದಿದೆ.
ರಾಜ್ಯಪಾಲರು ಸರಕಾರ ಬರೆದುಕೊಟ್ಟ ಭಾಷಣ ಮಾಡಲು ಮೊದಲೇ ನಿರಾಕರಿಸಿದ್ದರು. ಆದರೆ, ಕೇಂದ್ರ ಸರಕಾರದ ವಿರುದ್ಧ ಇದ್ದ ೧೧ ಪ್ಯಾರಗಳನ್ನು ಕೈಬಿಡುವಂತೆ ಸೂಚನೆ ನೀಡಿದ್ದರು. ಆದರೆ, ಸರಕಾರ ಅದನ್ನು ಕೈಭಿಡಲು ನಿರಾಕರಿಸಿತ್ತು. ಹೀಗಾಗಿ, ರಾಜ್ಯಪಾಲರ ಸರಕಾರದ ಪರ ಭಾಷಣ ಮಾಡಲು ನಿರಾಕರಿಸಿ, ಕೇವಲ ಸರಕಾರಕ್ಕೆ ಶುಭಾಶಯ ಕೋರಿಯಷ್ಟೇ ಭಾಷಣ ಮುಗಿಸಿದರು.
ಸಂಪ್ರದಾಯದAತೆ ಸದನಕ್ಕೆ ಆಗಮಿಸಿದ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದರು. ಮೂರೇ ಲೈನ್‌ನಲ್ಲಿ ಭಾಷಣ ಮುಗಿಸಿ ಹೊರಗೆ ನಡೆದರು. ರಾಜ್ಯಪಾಲರ ನಡೆಯನ್ನು ಬಿಜೆಪಿ ಶಾಸಕರು ಸ್ವಾಗತಿಸಿದರೆ, ಕಾಂಗ್ರೆಸ್ ಶಾಸಕರು ರಾಜ್ಯಪಾಲರನ್ನು ಅಡ್ಡಗಟ್ಟುವ ಪ್ರಯತ್ನ ನಡೆಸಿದರು.
ಬಿ.ಕೆ. ಹರಿಪ್ರಸಾದ್ ಸೇರಿದಂತೆ ಅನೇಕ ಶಾಸಕರು ರಾಜ್ಯಪಾಲರನ್ನು ಅಡ್ಡಗಟ್ಟಿ ಭಾಷಣ ಓದುವಂತೆ ಮನವಿ ಮಾಡಿಕೊಂಡರು. ಘೋಷಣೆಗಳನ್ನು ಕೂಗಿ ಆಕ್ಷೇಪ ವ್ಯಕ್ತಪಡಿಸಿದರು. ಆದರೆ, ರಾಜ್ಯಪಾಲರು ವಾಪಸ್ ಹೊರನಡೆದರು. ರಾಜ್ಯಪಾಲರ ಈ ನಡೆಗೆ ಆಕ್ಷೇಪ ವ್ಯಕ್ತವಾಯಿತು.

