ಉಪಯುಕ್ತ ಸುದ್ದಿ

ರಸ್ತೆ ವಿಸ್ತರಣೆಗೆ ಅರಮನೆ ಭೂಮಿ ಬಳಕೆಗೆ ನಿರ್ಧಾರ

Share It


ಬೆಂಗಳೂರು: ಅರಮನೆ ಸುತ್ತಮುತ್ತಿನ ರಸ್ತೆಗಳ ವಿಸ್ತೀರ್ಣ ಮಾಡುವ ಸಂಬಂಧ ನಡೆಯುತ್ತಿದ್ದ ಜಿದ್ದಾಜಿದ್ದಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಮಹತ್ವದ ಆದೇಶವೊಂದನ್ನು ಹೊರಡಿಸಿದೆ.

ಬೆಂಗಳೂರು ಅರಮನೆ, ಅರಮನೆ ಮೈದಾನದ ಸುತ್ತ ಅನೇಕ ರಸ್ತೆಗಳು ಕಿರಿದಾಗಿದ್ದವು. ಇದರಿಂದಾಗಿ ಮೇಖ್ರಿ ವೃತ್ತ, ಜಯಮಹಲ್, ದೂರದರ್ಶನ ಕೇಂದ್ರದ ಸುತ್ತ‌ಮುತ್ತ ವಿಪರೀತ ವಾಹನ ದಟ್ಟಣೆ ಉಂಟಾಗುತ್ತಿತ್ತು. ಹೀಗಾಹಿ, ಈ ಭಾಗದ ರಸ್ತೆಗಳ ಅಗಲೋಕರಣಕ್ಕೆ ಸರಕಾರ ತೀರ್ಮಾನಿಸಿತ್ತು. ಆದರೆ, ಅದಕ್ಕೆ ಸಂಬಂಧಿಸಿದಂತೆ ಅರಮನೆಯ ಜಮೀನು ವಾಶಪಡಿಸಿಕೊಳ್ಳಬೇಕಾದ ಅನಿವಾರ್ಯತೆ ಇತ್ತು.

ಈ ಸಂಬಂಧ ಕಾನೂನು ಸಮರ ನಡೆಸಿದ ರಾಜ್ಯ ಸರಕಾರ ಅಂತಿಮವಾಗಿ ನ್ಯಾಯಾಲಯದ ಒಪ್ಪಿಗೆಯ ಮೇರೆಗೆ ಭೂಮಿಯನ್ನು ವಶಪಡಿಸಿಕೊಂಡಿದೆ. ಆದರೆ, ಕಾಮಗಾರಿಗೆ ಕಾರಣಾಂತರಗಳಿಂದ ಚಾಲನೆ ನೀಡಲು ಸಾಧ್ಯವಾಗಿರಲಿಲ್ಲ. ಇದೀಗ ಇದಕ್ಕೆಲ್ಲ ತೆರೆ ಎಳೆದಿರುವ ರಾಜ್ಯ ಸರಕಾರ ರಸ್ತೆ ವಿಸ್ತರಣೆ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳಲು ಆದೇಶ ನೀಡಿದೆ.

ಈ ಸಂಬಂಧ ಅರಮನೆ ಅಧೀನದ 15.39 ಎಕರೆ ಜಾಗವನ್ನು ಸರಕಾರ ತನ್ನ ವಶಕ್ಕೆ ಪಡೆದುಕೊಂಡಿದೆ. ಈ ಸಂಬಂಧ ಡಿಪಿಆರ್ ಕರೆದಿದ್ದು, ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಿ, ಶೀಘ್ರದಲ್ಲಿಯೇ ರಸ್ತೆ ಅಗಲೀಕರಣ ನಡೆಸಲು ತೀರ್ಮಾನ ತೆಗೆದುಕೊಂಡಿದೆ.


Share It

You cannot copy content of this page