ಸುದ್ದಿ

ರೈತನಿಗೆ ಅವಮಾನ: ಜಿ.ಟಿ. ಮಾಲ್ ಗೆ ಏಳು ದಿನ ಬೀಗ ?

Share It

ಬೆಂಗಳೂರು: ರೈತನಿಗೆ ಪಂಚೆ ಹಾಕಿದ್ದ ಕಾರಣಕ್ಕೆ ಅವಮಾನ ಮಾಡಿದ ಜಿ.ಟಿ. ಮಾಲ್ ವಿರುದ್ಧ ಸರಕಾರ ಕ್ರಮಕ್ಕೆ ಮುಂದಾಗಿದ್ದು, ಏಳು ದಿನಗಳ ಕಾಲ ಬಂದ್ ಮಾಡಿಸಲು ತೋರ್ಮಾನಿಸಿದೆ.

ಜಿ.ಟಿ. ಮಾಲ್ ನಲ್ಲಿ ಮಗನೊಂದಿಗೆ ಬಂದಿದ್ದ ರೈತ ಪಕೀರಪ್ಪ ಎಂಬಾತನನ್ನು ಜಿ.ಟಿ. ಮಾಲ್ ಸಿಬ್ಬಂದಿ ತಡೆದು ನಿಲ್ಲಿಸಿದ್ದರು. ಇದು ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರವಾಗಿತ್ತು. ಕೆಲ ಕನ್ನಡ ಸಂಘಟನೆ ಹಾಗೂ ರೈತ ಸಂಘಟನೆಗಳು ಮಾಲ್ ವಿರುದ್ಧ ಪ್ರತಿಭಟನೆ ಕುಡ ನಡೆಸಿದ್ದರು.

ಈ ನಡುವೆ ಮಾಲ್ ಸಿಬ್ಬಂದಿ ಮತ್ತು ಮಾಲೀಕರು ರೈತನ ಕ್ಷಮೆ ಕೇಳಿ, ಆತನಿಗೆ ಸನ್ಮಾನ ಮಾಡಿದ್ದಾರೆ. ಇದರ ನಡುವೆಯೂ ಸರಕಾರ ಮಾಲ್ ಆಡಳಿತ ಮಂಡಳಿಗೆ ಬಿಸಿ ಮುಟ್ಟಿಸಲು ತೋರ್ಮಾನಿಸಿದ್ದು, ಏಳು ದಿನಗಳ ಕಾಲ ಮಾಲ್ ಬಂದ್ ಮಾಡಿಸಲು ತೀರ್ಮಾನಿಸಿದೆ. ಈ ಸಂಬಂಧ ಅಧಿಕೃತ ಆದೇಶ ಹೊರಬೀಳಲಿದೆ ಎಂಬ ಮಾಹಿತಿಯಿದೆ.

ಅಧಿವೇಶನದಲ್ಲಿ ಈ ಕುರಿತು ಎಲ್ಲ ಪಕ್ಷದ ಸದಸ್ಯರು ಚರ್ಚೆ ನಡೆಸಿದ್ದು, ಸರಕಾರದ ನಿರ್ಧಾರವನ್ನು ಸಚಿವ ಬೈರತಿ ಬಸವರಾಜ್ ಘೋಷಿಸಿದರು. ಏಳು ದಿನ ಬಂದ್ ಮಾಡಿಸಲು ತೀರ್ಮಾನಿಸಿದ್ದು, ಬಿಬಿಎಂಪಿ ಆಯುಕ್ತರ ಜತೆ ಮಾತನಾಡಲಾಗಿದೆ ಎಂದು ತಿಳಿಸಿದ್ದಾರೆ.


Share It

You cannot copy content of this page