ಸುದ್ದಿ

ಹೆಚ್ಚಳವಾಗುತ್ತದೆಯಾ ಹಿರಿಯ ನಾಗರಿಕರ, ವಿಶೇಷ ಚೇತನರ ಮಾಸಾಶನ

Share It

ಬೆಂಗಳೂರು; ಕರ್ನಾಟಕ ರಾಜ್ಯ ಇಡೀ ದೇಶದಲದಲಿಯೇ ಅತಿ ಹೆಚ್ಚು ಸಾಮಾಜಿಕ ಭದ್ರತೆ ಒಡಗಿಸುವ ರಾಜ್ಯ ಎಂಬ ಹೆಸರು ಗಳಿಸಿದ್ದು, 78 ,ಲಕ್ಷಕ್ಕೂ ಅಧಿಕ ಜನರಿಗೆ ಸಾಮಾಜಿಕ ಪಿಂಚಣಿ ಸೌಲಭ್ಯ ಒದಗಿಸುತ್ತಿದೆ.

ರಾಜ್ಯದಲ್ಲಿ ಒಟ್ಟು 78,14,513 ವ್ಯಕ್ತಿಗಳಿಗೆ ನಾನಾ ರೀತಿಯ ಪಿಂಚಣಿ ಫಲಾನುಭವಿಗಳು ಇದ್ದಾರೆ. ಪಿಂಚಣಿ ನೀಡುವ ಸಲುವಾಗಿಯೇ ಸರಕಾರದ ಬೊಕ್ಕಸದಿಂದ 10,500 ಕೋಟಿ ವ್ಯಯವಾಗುತ್ತಿದೆ ಮಾಹಿತಿಯನ್ನು ರಾಜ್ಯ ಸರಕಾರ ಬಹಿರಂಗಪಡಿಸಿದೆ.

ವಿಕಲಚೇತನ ಹಾಗೂ ಮನೋರೋಗಕ್ಕೆ ತುತ್ತಾಗಿರುವವರಿಗೆ, ವಯೋವೃದ್ಧರಿಗೆ, ವಿಧವೆಯರಿಗೆ ಸೇರಿ ದುರ್ಬಲ ವರ್ಗದ ಜನರಿಗೆ ಪಿಂಚಣಿ ಸೌಲಭ್ಯ ಒದಗಿಸಲಾಗುತ್ತಿದೆ. ಇದು ದೇಶದಲ್ಲೇ ಇಂತಹ ಪಿಂಚಣಿ ನೀಡುವ ವಿಚಾರದಲ್ಲಿ ಕರ್ನಾಟಕ, ದೇಶದ ಮುಂಚೂಣಿ ರಾಜ್ಯ ಎಂಬ ಹೆಗ್ಗಳಿಕೆ ಪಡೆಯುವಂತೆ ಮಾಡಿದೆ.

ಶೇ.40 ರಿಂದ ಶೇ.75 ರಷ್ಟು ಅಂಗವಿಕಲತೆ ಇರುವವರಿಗೆ 2021 ರಿಂದ 1,400 ರೂಪಾಯಿ ಹಾಗೂ ಶೇ.75ಕ್ಕೂ ಹೆಚ್ಚು ಅಂಗ ವಿಕಲತೆ ಹಾಗೂ ಮನೋರೋಗಿಗಳಿಗೆ 2,000 ರೂಪಾಯಿ ಮಾಶಾಸನ ನೀಡಲಾಗುತ್ತಿದೆ.  ರಾಜ್ಯದಲ್ಲಿ ಒಟ್ಟು 78,14,513 ವ್ಯಕ್ತಿಗಳಿಗೆ ನಾನಾ ರೀತಿಯ ಸಾಮಾಜಿಕ ಭದ್ರತಾ ಪಿಂಚಣಿ ನೀಡಲಾಗುತ್ತಿದೆ. ಇದಕ್ಕಾಗಿಯೇ ಪ್ರತಿವರ್ಷ 10500 ಕೋಟಿ ರೂಪಾಯಿ ವ್ಯಯಿಸಲಾಗುತ್ತಿದೆ” ಎಂದು ಸರಕಾರ ವಿಧಾನ ಪರಿಷತ್ ಗೆ ವಾಹಿತಿ ನೀಡಿದೆ.

ಕೇಂದ್ರದಿಂದಲೂ ನೆರವು ಸಿಗುವ ನಿರೀಕ್ಷೆ: ಸಾಮಾಜಿಕ ಭದ್ರತಾ ಪಿಂಚಣಿ ಅಡಿಯಲ್ಲಿ ವಿಕಲಚೇತನರು ಹಾಗೂ ಮನೋರೋಗಕ್ಕೆ ತುತ್ತಾಗಿರುವವರಿಗೆ ನೀಡುತ್ತಿರುವ ಮಾಶಾಸನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದಲೂ ಹೆಚ್ಚಿನ ನೆರವು ಸಿಗುವ ನಿರೀಕ್ಷೆ ರಾಜ್ಯ ಸರ್ಕಾರಕ್ಕಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.

ರಾಜ್ಯ ಸರ್ಕಾರ 78 ಲಕ್ಷ ಜನರಿಗೆ ಮಾಶಾಸನ ನೀಡುತ್ತಿದ್ದರೆ, ಕೇಂದ್ರ ಸರ್ಕಾರ ಕೇವಲ 13 ಲಕ್ಷ ಜನರಿಗೆ ಮಾತ್ರ ಅವರ ಪಾಲಿನ ಹಣ ನೀಡುತ್ತಿದೆ. ಅದರಲ್ಲೂ ನಾವು ರೂ.1,400 ರಿಂದ ರೂ. 2,000 ಹಣ ಮಾಶಾಸನ ನೀಡುತ್ತಿದ್ದರೆ, ಕೇಂದ್ರದ ಅನುದಾನ ಕೇವಲ ರೂ.200 ರಿಂದ ರೂ.400 ರೂಪಾಯಿ ಮಾತ್ರ. ಈ ಕುರಿತು ಹಣಕಾಸು ಸಚಿವೆ ನಿರ್ಮಲಾ‌ಸೀತರಾಮನ್ ಅವರಿಗೆ ಮನವಿ ಮಾಡಲಾಗಿತ್ತು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ನವೆಂಬರ್‌ 8, 2012 ರಲ್ಲಿ ಕೊನೆಯದಾಗಿ ಕೇಂದ್ರ ಸರಕಾರ ಪರಿಷ್ಕರಣೆ ಮಾಡಿತ್ತು. ಕಳೆದ 12 ವರ್ಷಗಳಿಂದ ಒಂದು ಪೈಸೆ ಪರಿಷ್ಕರಣೆ ಮಾಡಿಲ್ಲ.  ಹೀಗಾಗಿ ರಾಜ್ಯದ ಪರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಮೆಮೋರಾಂಡಂ ಸಲ್ಲಿಸಿದ್ದೇನೆ. ಆ ಮೆಮೋರಾಂಡಂ ನಲ್ಲಿ ಮಾಶಾಸನ ದರ ಪರಿಷ್ಕರಿಸಿ ಹಾಗೂ ನಾವು 78 ಲಕ್ಷ ಜನರಿಗೆ ಮಾಶಾಸನ ನೀಡುತ್ತಿದ್ದೇವೆ. ಕೇಂದ್ರ ಸರ್ಕಾರ ಕೇವಲ 13 ಲಕ್ಷ ಜನರಿಗೆ ಮಾತ್ರ ಅನುದಾನ ನೀಡುತ್ತಿರುವ ಸಂಖ್ಯೆ ಹೆಚ್ಚಿಸಬೇಕು ಎಂದು ಮನವಿ ಮಾಡಲಾಗಿಸೆ.‌


Share It

You cannot copy content of this page