ಸರಕಾರಿ ಶಾಲೆಗಳ ಬಲವರ್ಧನೆ ಅವಶ್ಯ: ಹುಲಿಕಲ್ ನಟರಾಜ್
ಹೊಸಕೋಟೆ : ಪ್ರತಿಯೊಬ್ಬ ಪೋಷಕರು
ಮಕ್ಕಳಿಗೆ ಆಸ್ತಿ ಮಾಡಬೇಡಿ ಶಿಕ್ಷಣ ಎಂಬ ಅಸ್ತಿಯನ್ನು ನೀಡಿ ಶಿಕ್ಷಣದಿಂದ ಎಲ್ಲವನ್ನು ಸಾಧಿಸುವ ಶಕ್ತಿ ಬರುತ್ತದೆ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ರಾಜ್ಯಾಧ್ಯಕ್ಷ ಡಾ.ಹುಲಿಕಲ್ ನಟರಾಜ್ ಹೇಳಿದರು.
ಸೂಲಿಬೆಲೆ ಹೋಬಳಿ ಸಿದ್ದೇನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಜಯಂತಿ ಅವರಿಗೆ ಬಿಳ್ಕೊಡುಗೆ ನೆರವೇರಿಸಿ ಮಾತನಾಡಿದರು. ಶಿಕ್ಷಕ ವರ್ಗ ಹಾಗೂ ಪೋಷಕ ವರ್ಗವು ಸಮಾನ ಸಹಕಾರದಿಂದ ಮಾತ್ರ ಸರ್ಕಾರಿ ಶಾಲೆಗಳು ಉಳಿಯಲು ಸಾಧ್ಯ ಶಿಕ್ಷಕರು ಕಲ್ಲಿನ ಬಂಡೆಯನ್ನು ಸಹ ಕೆತ್ತಿ ಶಿಲ್ಪಗಳನ್ನಾಗಿ ಮಾಡುವ ಶಕ್ತಿ ಹೊಂದಿರುತ್ತಾರೆ ಎಂದರು.
ಸಿದ್ದೇನಹಳ್ಳಿ ಗ್ರಾಮದ ಸರ್ಕಾರಿ ಶಾಲೆಗೆ ಮೀಸಲಾಗಿರುವ 5 ಎಕರೆ ಜಾಗವನ್ನು ಒತ್ತುವರಿ ಮಾಡಲು ಅವಕಾಶ ನೀಡಬಾರದು ಶಾಲಾ ಅಭಿವೃದ್ಧಿ ಸಮಿತಿ ಇದನ್ನು ಕಾವಲು ಕಾಯಬೇಕು ಸರ್ಕಾರಿ ಸ್ವತ್ತು ಉಳಿಯಬೇಕು ಎಂದರು.
ಜಿಲ್ಲಾಧ್ಯಕ್ಷ ಎಂ.ಆರ್.ಉಮೇಶ್ ಮಾತನಾಡಿ ಸರ್ಕಾರಿ ಶಾಲೆಗಳು ಬಲವರ್ಧನೆಯಾಗಬೇಕಾದರೆ ಸರ್ಕಾರಕ್ಕಿಂತ ಸ್ಥಳಿಯ ಸಂಘ ಸಂಸ್ಥೆಗಳ ಸಹಕಾರ ಅವಶ್ಯ. ಸರ್ಕಾರಿ ಶಾಲೆಗಳಲ್ಲಿ ದಾಖಲಾತೆ ಕುಸಿಯುತ್ತಿದ್ದು ಪೋಷಕರಲ್ಲಿರುವ ಆಂಗ್ಲ ವ್ಯಾಮೋಹವೇ ಕಾರಣ ಮೊದಲ ಪಾಠ ಶಾಲೆ ಮನೆಯಾಗಬೇಕು ತಂದೆ ತಾಯಿಗಳು ಮಕ್ಕಳಿಗೆ ಮೊದಲ ಗುರುಗಳಾಗಬೇಕು ಎಂದು ಹೇಳಿದರು.
ಮುಖ್ಯ ಶಿಕ್ಷಕಿ ಜಯಂತಿ ಅಭಿನಂದನೆ ಸ್ವೀಕರಿಸಿ ಮಾತನಾಡಿ ನಾನು ಬಂದ 2 ವರ್ಷಗಳ ಅವಧಿಯಲ್ಲಿ ನನ್ನ ಕೈಲಾದಷ್ಟು ಸೇವೆ ಮಾಡಿದ್ದೇನೆ ನನಗೆ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ ಕಾರಣದಿಂದ ಶಾಲೆಯನ್ನು ಬಿಟ್ಟುಹೋಗಬೇಕಾಗಿದೆ ಮುಂದೆ ಬರುವ ಶಿಕ್ಷಕರು ಶಾಲೆಯನ್ನು ಉತ್ತಮವಾಗಿ ಮುನ್ನೆಡಸಬೇಕು ಎಂದು ಹೇಳಿದರು.
ಶಾಲಾ ಅಧ್ಯಕ್ಷ ಮುರುಳಿ, ನಿವೃತ್ತ ಶಿಕ್ಷಕ ತಿಮ್ಮರಾಯಪ್ಪ, ಬಿ.ಆರ್. ಗಣೇಶ್, ಬಾಗಲೂರು ಶಾಲೆ ಮುಖ್ಯಶಿಕ್ಷಕಿ ಮಲ್ಲಿಕಾ,ಕಂಬಳೀಪುರ ಶಾಲೆ ಸಂಗೀತಾ, ಬೆಟ್ಟಹಳ್ಳಿ ಶಾಲೆ ಶಿವೇಗೌಡ, ಸುಮಂಗಲ, ಜೇನುಗೂಡು ಟ್ರಸ್ಟ್ ನಿರ್ದೇಶಕ ತರಬಹಳ್ಳಿ ಹರೀಶ್, ಕಾರ್ಯಧರ್ಶಿ ಬೆಟ್ಟಹಳ್ಳಿ ಗೋಪಿನಾಥ್, ಸಹಾಯಕ ಇನ್ಸ್ ಪೆಕ್ಟರ್ ನಟರಾಜ್ ಮೂರ್ತಿ, ಸುನೀತಾ ಉಮೇಶ್, ಸೀಮಾ ಗ್ರಂಥಪಾಲಕ ಎಂ.ಪ್ರಶಾಂತ್, ಉಮಾದೇವಿ ಇತರರು ಇದ್ದರು.


