ರಾಜಕೀಯ ಸುದ್ದಿ

ಗ್ಯಾರಂಟಿ ಯೋಜನೆಗಳಿಗೆ SC/ST ಸಮುದಾಯದ ಹಣ ಬಲಿ

Share It

  • ಸಂತೋಷ್ ಇರಕಸಂದ್ರ

ರಾಜ್ಯ ಸರ್ಕಾರದ ಬಹು ನಿರೀಕ್ಷಿತ ಯೋಜನೆಗಳಾದ ಗ್ಯಾರಂಟಿ ಯೋಜನೆಗಳು ಸದ್ಯ ಹಣವಿಲ್ಲದೆ ಹಳ್ಳ ಹಿಡಿಯುತ್ತಿವೆ. ದಲಿತರ ಉದ್ದಾರಕ್ಕೆಂದು ಇಟ್ಟಿದ್ದ ಹಣವನ್ನು ನೇರವಾಗಿ ಉಚಿತ ಗ್ಯಾರಂಟಿ ಗಳಿಗೆ ವರ್ಗಾವಣೆ ಮಾಡಿಕೊಳ್ಳುವ ಮೂಲಕ ಜನರ ಕೆಂಗಣ್ಣಿಗೆ ರಾಜ್ಯ ಸರ್ಕಾರ ಗುರಿಯಾಗಿದೆ.

ರಾಜ್ಯದ ಆಡಳಿತದ ಚುಕ್ಕಾಣಿಯನ್ನು ಹಿಡಿಯುವ ಮೊದಲು ನಾವು ದಲಿತರನ್ನು ಕೈ ಬಿಡುವುದಿಲ್ಲ, ರೈತರನ್ನು ರಕ್ಷಿಸುತ್ತವೆ. ನಮ್ಮದು ಬಡವರ ಪರ ಸರ್ಕಾರ ಎಂದು ಹೇಳಿದ್ದ ಕಾಂಗ್ರೇಸ್, ಈಗ ನಾವು ಯಾವುದರ ಪರವು ಅಲ್ಲ. ಲಕ್ಷ್ಮೀಯ(ಹಣದ) ಪರ ಎಂಬಂತೆ ಇತರ ಯೋಜನೆಗಳ ಹಣವನ್ನು ತಮ್ಮ ಗ್ಯಾರಂಟಿ ಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ.

“ದಲಿತರ ಹಣವನ್ನು ನಾವು ಉಚಿತ ಗ್ಯಾರಂಟಿ ಗಳ ಅವರಿಗೆ ತಲುಪಿಸುತ್ತೇವೆ ಎಂಬ ಸಮರ್ಥನೆಯನ್ನು ಸಿದ್ದು ಸರ್ಕಾರ ಮಾಡಿಕೊಳ್ಳುತ್ತಿದೆ.” ಸಂವಿಧಾನ ಬದಲಾಗುತ್ತಿದೆ ಎಂದು ಹೌಹಾರಿದ ಖರ್ಗೆ ಈಗ ಮೌನಕ್ಕೆ ಜಾರಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮುನ್ನ ರಾಜ್ಯದಲ್ಲಿ ಸಾಕಷ್ಟು ಹಣವಿದೆ. ಬೇರೆ ಬೇರೆ ಮೂಲಗಳಿಂದ ಬರುವ ವರಮಾನ ಹೆಚ್ಚಿರುವುದರಿಂದ ರಾಜ್ಯದ ಆರ್ಥಿಕತೆಗೆ ಯಾವುದೇ ಹೊಡೆಯ ಆಗುವುದಿಲ್ಲ ಎಂದು ಹೇಳಿದ್ದ ಸರ್ಕಾರ ಹೀಗ ಹಣವಿಲ್ಲದೆ ಕಾರಂತ ST, SC ಸಮುದಾಯದ ಹಣವನ್ನು ಬಳಸಲು ಸಿದ್ಧವಾಗಿದೆ. ಆ ಸಮುದಾಯಕ್ಕೆ ಮಾತ್ರ ಗ್ಯಾರಂಟಿಯ ಮೂಲಕವೇ ಹಣ ನೀಡುತ್ತೇವೆ ಎಂಬ ಸರ್ಕಾರದ ಮಾತು ಹಾಸ್ಯಕ್ಕೆ ಕಾರಣವಾಗಿದೆ.

ಪ್ರಸ್ತುತ ಹಣಕಾಸಿನಲ್ಲಿ ಉಚಿತ ಗ್ಯಾರಂಟಿಗಾಗಿ 39,171 ಕೋಟಿ ಮೀಸಲಿಟ್ಟ ಸರ್ಕಾರ ಹೀಗ 14,282 ಕೋಟಿ ಯನ್ನು ಬಳಸಲು ನಿಧಾರ ಮಾಡಿದೆ. ಗೃಹ ಲಕ್ಷ್ಮೀ ಗೆ 7,881ಕೋಟಿ, ಗೃಹ ಜೋತಿ ಗೆ 2, 585ಕೋಟಿ ಅನ್ನ ಭಾಗ್ಯ ಕ್ಕೆ 2,187 ಕೋಟಿ, ಶಕ್ತಿ ಯೋಜನೆಗೆ 1451 ಕೋಟಿ, ಯುವ ನಿಧಿಗೆ 175 ಕೋಟಿ ಯನ್ನ ಜಾರಿ ಮಾಡಿದೆ. ಒಂದು ವೇಳೆ ದಲಿತರ ಹಣವು ಖರ್ಚು ಮಾಡದೆ ಉಳಿದರೆ ಅದನ್ನು ಹಾಗೇ ಬಿಡಿ. ಅದನ್ನು ಗ್ಯಾರಂಟಿ ಗೆ ಬಳಕೆ ಮಾಡುವುದು ಸರಿಯಲ್ಲ. ಅದೇ ಕಾಂಗ್ರೇಸ್ ಪಕ್ಷದಲ್ಲಿ sc st ಯ ನಾಯಕರು ಈ ಬಗ್ಗೆ ಮೌನ ತಳಿರೋದು ಸರಿಯಲ್ಲ. ದಲಿತ ಸಂಘಟನೆಗಳು ಪ್ರಶ್ನೆ ಮಾಡಬೇಕಿದೆ.

ಈ ಯೋಜನೆಗಳನ್ನು ಸರಿಯಾಗಿ ಪುನರ್ ವಿಮರ್ಶೆ ಮಾಡಿ ವೈಜ್ಞಾನಿಕವಾಗಿ ನಿಜವಾದ ಫಲಾನುಭವಿಗಳನ್ನು ಹುಡುಕಿ ನೀಡಿದರೆ ಮಾತ್ರ ರಾಜ್ಯ ಆರ್ಥಿಕ ದಿವಾಳಿಯಿಂದ ಪರಾಗುತ್ತದೆ. ಇಲ್ಲವಾದರೆ ಆರ್ಥಿಕ ಸುಳಿಯಲ್ಲಿ ರಾಜ್ಯ ಸಿಲುಕುವ ಸಾಧ್ಯತೆ ಹೆಚ್ಚು ಎಂದು ಹೇಳಬಹುದು.


Share It

You cannot copy content of this page