ಬೆಂಗಳೂರು : ಪತ್ರಕರ್ತ ನಿರ್ದೇಶಕ ಆಗಿ ಹೆಸರು ಮಾಡಿರುವ ಇಂದ್ರಜಿತ್ ಲಂಕೇಶ್ ನಿರ್ದೇಶನದ ಗೌರಿ ಸಿನಿಮಾವು ಅಗಸ್ಟ್ 15 ರಂದು ತೆರೆಗೆ ಬರಲಿದೆ. ಸದ್ಯ ಚಿತ್ರದ ಟ್ರೈಲರ್ ಅನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಡುಗಡೆಗೊಳಿಸಿದ್ದಾರೆ.
ತನ್ನ ಅಕ್ಕನ ಮೇಲಿನ ಪ್ರೀತಿಗೆ ಚಿತ್ರಕ್ಕೆ ಗೌರಿ ಎಂಬ ಹೆಸರನ್ನು ಇಟ್ಟಿದ್ದಾರೆ . ಚಿತ್ರಕ್ಕಾಗಿ ಸಮರ್ಜಿತ್ ಕುದುರೆ ಸವಾರಿ, ಡ್ಯಾನ್ಸ್, ಪೈಟಿಂಗ್ ಗಳನ್ನು ಸ್ವತಃ ಅಭ್ಯಾಸ ಮಾಡಿದ್ದಾರೆ.
ಚಿತ್ರದಲ್ಲಿ ಸಮರ್ಜಿತ್ ಲಂಕೇಶ್, ಸಾನ್ಯ ಅಯ್ಯರ್ ನಟನೆ ಮಾಡಿದ್ದಾರೆ. ಟ್ರೈಲರ್ ಬಿಡುಗಡೆಯ ಸಂದರ್ಭದಲ್ಲಿ ಲಂಕೇಶ್ ಸುದೀಪ್ ಅವರ ಬಗ್ಗೆ ಮಾತನಾಡಿದ್ದಾರೆ. ” ಸುದೀಪ್ ನಂಗೆ ಸಿನಿಮಾಗೆ ಬರುವುದಕ್ಕಿಂತ ಮುಂಚೆಯೇ ಪರಿಚಯ ಇದ್ದವರು. ಸುಮಾರು 25 ವರ್ಷಗಳ ಬಾಂಧವ್ಯ ನಮ್ಮಲಿದೆ.
ಸುದೀಪ್ ಮಗಳಿಗೆ ನಾನು ಡೈಮಂಡ್ ನೆಕ್ಲೆಸ್ ಗಿಫ್ಟ್ ಕೊಟ್ಟಿದ್ದೆ. ಅದನ್ನು ಅವರು ನನಗೆ ವಾಪಸು ಮಾಡಿದರು. ಅವರಿಗೆ ಉಡುಗೊರೆ ಕೊಡೋದು ಇಷ್ಟ ವಾಗಲ್ಲ. ಕ್ರಿಕೆಟ್ ಆದ್ರೆ ಅವರಿಗೆ ತುಂಬಾ ಇಷ್ಟ . ಅದ್ದರಿಂದ ಅವರಿಗೆ ಕ್ರಿಕೆಟ್ ಬ್ಯಾಟ್ ಉಡುಗೊರೆಯಾಗಿ ಕೊಡುತ್ತಿದ್ದೇನೆ” ಎಂದು ಹೇಳಿದರು
ಈ ಸಂದರ್ಭದಲ್ಲಿ ನಟಿ ಪ್ರಿಯಾಂಕ ಉಪೇಂದ್ರ ಮಾತನಾಡಿ,” ಇಂದ್ರಜಿತ್ ಅವರು ಒಳ್ಳೆ ಸಿನಿಮಾ ಮೇಕಿಂಗ್ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಅವರು ಸೋಲುವುದನ್ನು ಕಲಿತಿದ್ದಾರೆ. ತಲೆ ಭಾಗುವುದನ್ನು ಕಲಿತಿದ್ದಾರೆ. ಹಾಗೇ ಸಮರ್ಜಿತ್ ರವರ ಮಾತಿನಲ್ಲಿ ಅವರ ಮುಗ್ಧತೆ ಕಾಣುತ್ತಿದೆ. ಇಂದ್ರಜಿತ್ ಲಂಕೇಶ್ ನನ್ನ ಗೆಳೆಯ ಆಗಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ” ಎಂದು ಹೇಳಿದರು.
ನಟಿ ಸಾನ್ಯ ರನ್ನು ಧಾರಾವಾಹಿಯಲ್ಲಿ ನೋಡಿದ್ದೇನೆ. ಹಾಗೂ ಒಳ್ಳೆಯ ಬರಹಗಾರ್ತಿ. ಚಿತ್ರದ ತೆರೆಗೆ ಬಂದ ಮೇಲೆ ಯಾವ ಸ್ವರೂಪ ಪಡೆಯುತ್ತದೋ ಗೊತ್ತಿಲ್ಲ. ಎಲ್ಲದಕ್ಕೂ ಸಿದ್ದವಿರಬೇಕು ಎಂಬ ಕಿವಿ ಮಾತು ಹೇಳಿದರು.
ಛಾಯಾಗ್ರಹಣ ಎಜೆ ಶೆಟ್ಟಿ ನಿರ್ವಹಿಸಿದ್ದಾರೆ. ಬಿ.ಎ.ಮಧು, ರಾಜಶೇಖರ್, ಮಾಸ್ತಿ ಯವರು ಮಾತುಕತೆಯನ್ನು ಬರೆದಿದ್ದಾರೆ. ಸಾಹಿತ್ಯವನ್ನು ಕೆ.ಕಲ್ಯಾಣ್, ವಿ.ನಾಗೇಂದ್ರ ಪ್ರಸಾದ್, ಕವಿರಾಜ್ ರಚನೆ ಮಾಡಿದ್ದಾರೆ.