ಟೀಮ್ ಇಂಡಿಯಾ ಟಿ 20 ವಿಶ್ವ ಕಪ್ ಗೆದ್ದ ಬೆನ್ನಲ್ಲೇ ಹೆಡ್ ಕೋಚ್ ಹುದ್ದೆಗೆ ಕನ್ನಡಿಗ ರಾಹುಲ್ ದ್ರಾವಿಡ್ ವಿದಾಯ ಹೇಳಿದ್ದರು. ಇದರಿಂದ ಭಾರತೀಯ ತಂಡದ ಹೆಡ್ ಕೋಚ್ ಹುದ್ದೆಗೆ ಬಿಸಿಸಿಐ, ಮಾಜಿ ಕ್ರಿಕೆಟಿಗ, ಮಾಜಿ ಸಂಸದ ಗೌತಮ್ ಗಂಭೀರ್ ಅವರನ್ನು ನೇಮಕ ಮಾಡಿದೆ.
2024ರ ಐಪಿಎಲ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಮೆಂಟರ್ ಆಗಿ ಕಾರ್ಯ ನಿರ್ವಹಿಸಿದ ಗೌತಮ್ ಗಂಭೀರ್ ಕೆಕೆಆರ್ ಗೆ ಮೂರನೇ ಐಪಿಎಲ್ ಟ್ರೋಫಿ ಗೆಲ್ಲಿಸಿ ಕೊಡುವಲ್ಲಿ ಯಶಸ್ವಿಯಾದರು. ಈಗ ಕೆಕೆಆರ್ ತೊರೆದು ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಟಿ 20 ವಿಶ್ವ ಕಪ್ ಗೆದ್ದ ಬಳಿಕ ರಾಹುಲ್ ದ್ರಾವಿಡ್ ಮತ್ತು ಬಿಸಿಸಿಐ ನಡುವಿನ ಒಪ್ಪಂದ ಮುಗಿದಿತ್ತು. ಆದ್ದರಿಂದ ಟೀಮ್ ಇಂಡಿಯಾದ ಹೆಡ್ ಕೋಚ್ ಹುದ್ದೆಗೆ ಹೊಸ ಅರ್ಜಿಯನ್ನು ಜೂನ್ 13 ರಂದು ಆಹ್ವಾನಿಸಲಾಗಿತ್ತು. ಆ ಅರ್ಜಿ ಗಳಲ್ಲಿ ಬಿಸಿಸಿಐ ಗೌತಮ್ ಗಂಭೀರ್ ಅವರನ್ನು ಆಯ್ಕೆ ಮಾಡಿದೆ.
ಗೌತಮ್ ಗಂಭೀರ್ ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿ ನೇಮಕಗೊಂಡ ನಂತರ, ಬ್ಯಾಟಿಂಗ್ ಕೋಚ್ ಸ್ಥಾನಕ್ಕೆ ಅಭಿಷೇಕ್ ನಾಯರ್ ಅವರನ್ನು ಬೌಲಿಂಗ್ ಕೋಚಾಗಿ ವಿನಯ್ ಕುಮಾರ್ ಅವರನ್ನು ನೇಮಕ ಮಾಡಿ ಎಂದು ಬಿಸಿಸಿಐ ಮುಂದೆ ಮನವಿ ಮಾಡಿಕೊಂಡಿದ್ದಾರೆ.