ಹೊಸಕೋಟೆ: ಈಗಲಾದರೂ ಎಚ್ಚೆತ್ತುಕೊಂಡುಪರಿಸರ ರಕ್ಷಿಸದಿದ್ದರೆ, ಮುಂದಿನ ದಿನಗಳಲ್ಲಿ ಶುದ್ಧಗಾಳಿ, ನೀರು ಹಾಗೂ ಆಹಾರಕ್ಕಾಗಿ ಬಡಿದಾಡುವ ಪರಿಸ್ಥಿತಿ ಬಂದರೂ ಆಶ್ಚರ್ಯವಿಲ್ಲ. ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ನ ಪರಿಸರ ಉಳಿಸಿ-ಬೆಳೆಸಬೇಕು ಎಂದು ಕಂಬಳಿಪುರ ಗ್ರಾಪಂ ಅಧ್ಯಕ್ಷರಾದ ಮಮತಾ ಗೋಪಾಲ ತಿಳಿಸಿದರು.
ಪಂಚಾಯ್ತಿಗೆ ಒಳಪಡುವ ಹಳ್ಳಿಗಳಲ್ಲಿ ದೊಡ್ಡಕೋಲಿಗ ಮತ್ತು ಬೇಗೂರು ಹಾಗೂ ಸುತ್ತಮುತ್ತಗ್ರಾಮಗಳಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಅವರು ಗಿಡ ನೆಟ್ಟು ಉದ್ಘಾಟಿಸಿ ಮಾತನಾಡಿದರು. ಮನುಷ್ಯನ ದುರಾಸೆಯಿಂದಾಗಿ ಇಡೀ ಪ್ರಕೃತಿ ಆಪತ್ತಿನ ಅಂಚಿಗೆ ತಲುಪಿದೆ. ನದಿ, ಕೆರೆ ಸೇರಿ ಜಲಮೂಲಗಳು ಮಲಿನವಾಗುತ್ತಿವೆ.ಮಾನವಇನ್ನಾದರೂಎಚ್ಚೆತ್ತುಕೊಂಡುಹೊಸಬದುಕುಕಟ್ಟಿಕೊಳ್ಳದಿದ್ದಲ್ಲಿ ಭವಿಷ್ಯದಲ್ಲಿ ಉಳಿಗಾಲವಿಲ್ಲ ಎಂದರು.

ಪಿಡಿಒ ಮಂಜುನಾಥ್ ಮಾತನಾಡಿ, ಜನರು ವಾಸಿಸಲು ಇರುವುದೊಂದೇ ಭೂಮಿ ಎಂಬುದನ್ನು ಮರೆಯಬಾರದು. ನಮ್ಮ ಸುತ್ತಲಿನ ಪರಿಸರದಲ್ಲಿನ ಸಮತೋಲನ ಕಾಪಾಡಬೇಕಾದರೆ ಗಿಡ, ಮರಗಳನ್ನು ನೆಟ್ಟು, ನೀರುಣಿಸಿ ಪೋಷಿಸಬೇಕಾದ ಕರ್ತವ್ಯ ಸಮಸ್ತ ನಾಗರಿಕರದ್ದಾಗಿದೆ ಎಂದರು. ಟಿಎಸ್ , ಕಾರ್ಯದರ್ಶಿ ಪುನೀತ್ ಬಿಜಿ, ಕರ ವಸೂಲಿಗಾರ ಮಂಜುನಾಥ್ ಹಾಗೂ ನಾಗರಾಜ್ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಶಿವುಕುಮಾರ್ ಬೈರೆಗೌಡ, ಪೂಜಾ ರಮೇಶ್ ಅವೀನ್ ಕುಮಾರ್ ಮತ್ತಿತರಿದ್ದರು

