ಐದು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ !
ಕಿಶನ್‌ಗಂಜ್: ಹೆರಿಗೆ ಎಂಬುದು ಹೆಣ್ಣಿಗೆ ಮರುಹುಟ್ಟು ಎನ್ನುತ್ತಾರೆ. ಒಂದು ಹೆರಿಗೆಗೆ ಅದೆಷ್ಟೋ ಹೆಣ್ಣುಮಕ್ಕಳು ಮರುಜನ್ಮ ಪಡೆದಂತಾಗುತ್ತದೆ. ಇಂತಹದ್ದರಲ್ಲಿ ಒಂದೇ ಹೆರಿಗೆಯಲ್ಲಿ ಐದು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಅಪರೂಪದ ಘಟನೆ ಬಿಹಾರದಲ್ಲಿ ನಡೆದಿದೆ.
ಬಿಹಾರದ ಕಿಶನ್‌ಗಂಜ್ ಜಿಲ್ಲೆಯ ಠಾಕೂರ್‌ಗಂಜ್‌ನ ನಿವಾಸಿ ತಾಹಿರಾ ಬೇಗಂ ಐದು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ. ಐದುಶಿಶುಗಳು ಆರೋಗ್ಯವಾಗಿವೆ. ಎಂದು ಆರೋಗ್ಯಾಧಿಕಾರಿಗಳು ದೃಢಪಡಿಸಿದ್ದಾರೆ. ತಾಹಿರಾ ಎರಡು ತಿಂಗಳ ಗರ್ಭಿಣಿಯಾಗಿದ್ದಾಗ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದ್ದು, ಹೊಟ್ಟೆಯಲ್ಲಿ ನಾಲ್ಕು ಮಕ್ಕಳಿರುವುದು ಗೊತ್ತಾಗಿದೆ. ಇದಾಗಿ ೨ ತಿಂಗಳ ನಂತರ ಮತ್ತೆ ತಪಾಸಣೆ ನಡೆಸಿದಾಗ ಐದು ಶಿಶುಗಳಿವೆ ಎಂದು ವೈದ್ಯರು ತಿಳಿಸಿದ್ದರು.
ಇತ್ತೀಚೆಗಷ್ಟೇ ಬೆನ್ನುನೋವು ಕಾಣಿಸಿಕೊಂಡಿದ್ದರಿAದ ಕುಟುಂಬಸ್ಥರು ಠಾಕೂರ್‌ಗಂಜ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದರು. ಅಲ್ಲಿ ವೈದ್ಯರು ತಾಹಿರಾ ಅವರಿಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ. ಸದ್ಯ ಐವರು ಹೆಣ್ಣು ಮಕ್ಕಳು ಆರೋಗ್ಯವಾಗಿವೆ. ತಾಹಿರಾಗೆ ಈಗಾಗಲೇ ಒಬ್ಬ ಮಗನಿದ್ದಾನೆ.
ಗರ್ಭಾವಸ್ಥೆಯಲ್ಲಿ ಬಹು ಅಂಡಾಣುಗಳ ಫಲೀಕರಣ ಆಗುವುದರಿಂದ ಒಂದೇ ಭ್ರೂಣದಲ್ಲಿ ಹೆಚ್ಚು ಶಿಶುಗಳು ಜನಿಸುತ್ತವೆ. ಆನುವಂಶಿಕ ಕಾರಣಗಳಿಂದಲೂ ಇದು ಸಂಭವಿಸಬಹುದು. ಒಂದೇ ಹೆರಿಗೆಯಲ್ಲಿ ಎರಡು ಅಥವಾ ಮೂರು ಮಕ್ಕಳು ಹುಟ್ಟುವುದು ಸಹಜ. ಆದರೆ ಮೂರಕ್ಕಿಂತ ಹೆಚ್ಚು ಶಿಶುಗಳನ್ನು ವೈದ್ಯಕೀಯ ಪರಿಭಾಷೆಯಲ್ಲಿ ಪಾಲಿಜಿಗೋಟಿಕ್ ಎಂದು ಕರೆಯಲಾಗುತ್ತದೆ.