ಅಪರಾಧ ಸುದ್ದಿ

ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂ. ತೆರಿಗೆ ವಂಚಿಸಿದ್ದ ವ್ಯಕ್ತಿಯ ಬಂಧನ

Share It

ಬೆಳಗಾವಿ: ಸುಮಾರು 132 ಕೋಟಿ ರೂಪಾಯಿ ತೆರಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ತೆರಿಗೆ ಅಧಿಕಾರಿಗಳು ಫೆಡರಲ್ ಲಾಜಿಸ್ಟಿಕ್ ಕಂಪನಿಯ ನಕೀಬ್ ನಜೀಬ್ ಮುಲ್ಲಾ ಎಂಬಾತನನ್ನು ಬಂಧಿಸಿದ್ದಾರೆ.

ತೆರಿಗೆ ಸಲಹೆಗಾರನಾಗಿರುವ ನಕೀಬ್ ನಜೀಬ್ ಮುಲ್ಲಾ ನಕಲಿ ಸ್ವಾಮ್ಯದ ಸಂಸ್ಥೆಯ ಮೂಲಕ ಹಲವು ಸಂಸ್ಥೆಗಳ ತೆರಿಗೆ ಪಾವತಿ ಮತ್ತು ಜಿಎಸ್‌ಟಿ ಸಮಸ್ಯೆಗಳನ್ನು ನಿರ್ವಹಿಸುತ್ತಿದ್ದ ಎಂದು ಕೇಂದ್ರ ಜಿಎಸ್‌ಟಿ ಪ್ರಧಾನ ಆಯುಕ್ತ ದಿನೇಶ್ ಪಂಗಾರ್ಕರ್ ತಿಳಿಸಿದ್ದಾರೆ.

ಆರೋಪಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕೇಂದ್ರ ಜಿಎಸ್‌ಟಿ ಇಲಾಖೆಯ ಬೆಳಗಾವಿ ವಿಭಾಗದ ಅಧಿಕಾರಿಗಳು ಈ ಪ್ರಕರಣ ಬೆಳಕಿಗೆ ತಂದು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


Share It

You cannot copy content of this page