ಬೆಂಗಳೂರು: ಪಂಚೆ ಹಾಕಿಕೊಂಡು ಬಂದಿದ್ದಾರೆ ಎಂದು ರೈತನಿಗೆ ಅವಮಾನಿಸಿದ ಜಿ.ಟಿ. ಮಾಲ್ ಕೋಟ್ಯಂತರ ರು. ತೆರಿಗೆ ಬಾಕಿ ಉಳಿಸಿಕೊಂಡಿರುವುದು ಬೆಳಕಿಗೆ ಬಂದಿದೆ.
ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಆರೋಪದಲ್ಲಿ ಜಿ.ಟಿ. ಮಾಲ್ ಗೆ ಏಳು ದಿನ ಬೀಗ ಜಡಿಯಲು ತೀರ್ಮಾನಿಸಿದೆ. ಜಿ.ಟಿ. ಮಾಲ್ ಬಿಬಿಎಂಪಿ ಗೆ ಕೋಟಿ ರು. ತೆರಿಗೆ ಬಾಕಿ ಉಳಿಸಿಕೊಂಡಿದೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಮಾಲ್ ಬಾಗಿಲಿಗೆ ಬಿಬಿಎಂಪಿ ನೊಟೀಸ್ ಅಂಟಿಸಿದ್ದು, ತೆರಿಗೆ ಪಾವತಿ ನಂತರ ಮಾಲ್ ತೆರೆಯಲು ಅವಕಾಶ ಮಾಡಿಕೊಡುವುದಾಗಿ ತಿಳಿಸಿದೆ. ಈ ನಡುವೆ ಟ್ರೇಡ್ ಲೈಸೆನ್ಸ್ ಕೂಡ ಕ್ಯಾನ್ಸಲ್ ಮಾಡಲಾಗಿದೆ.