ಬೆಂಗಳೂರು : ಪದ್ಮನಾಭ ನಗರ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಗ್ಯಾರಂಟಿ ಸಂಪೂರ್ಣ ಜಾರಿ ಶಿಬಿರದ ಮೂರನೇ ವಾರದ ಕಾರ್ಯಕ್ರಮ ಪದ್ಮನಾಭ ನಗರ ವ್ಯಾಪ್ತಿಯಲ್ಲಿ ನಡೆಯಿತು.
ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಪ್ರಮೋದ್ ಶ್ರೀನಿವಾಸ್ ನೇತೃತ್ವದ ಶಿಬಿರದಲ್ಲಿ ನೂರಾರು ಫಲಾನುಭವಿಗಳು ಆಗಮಿಸಿ, ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಕೆಲವರು ಗ್ಯಾರಂಟಿ ಸ್ಕೀಂನ ಕೆಲವು ಯೋಜನೆಗಳನ್ನು ಹೊಸದಾಗಿ ನೊಂದಣಿ ಮಾಡಿಸಿಕೊಳ್ಳಲು ಅರ್ಜಿ ನೀಡಿದರು.
ಮೊದಲಿಗೆ ಕಾರ್ಯಕ್ರಮ ಪ್ರಸನ್ನ ಗಣೇಶ ದೇವಸ್ಥಾನ, ಗೌಡನಪಾಳ್ಯ, ಚಿಕ್ಕಗೌಡನಪಾಳ್ಯ, ದುರ್ಗಮ್ಮ ದೇವಸ್ಥಾನ ಹತ್ತಿರ, ರಾಗಿ ಮಶಿನ್, ಗೌಡನಪಾಳ್ಯ, ಮುನೇಶ್ವರ ಸರ್ಕಲ್‌ಗಳಲ್ಲಿ ನಡೆಯಿತು. ಪ್ರತಿ ಬಡಾವಣೆಯಲ್ಲಿ ನೂರಾರು ಜನರು ಆಗಮಿಸಿ ಗ್ಯಾರಂಟಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಸರಕಾರ ನೀಡುತ್ತಿರುವ ಗ್ಯಾರಂಟಿಗಳು ಜನರನ್ನು ತಲುಪುವಂತೆ ಮಾಡುವ ಸಲುವಾಗಿ ರಾಜ್ಯದಲ್ಲಿಯೇ ವಿನೂತನ ಕಾರ್ಯಕ್ರಮ ಆಯೋಜನೆ ಮಾಡುತ್ತಿರುವ ಪ್ರಮೋದ್ ಶ್ರೀನಿವಾಸ್ ತಮ್ಮ ಕಾರ್ಯದ ಬಗ್ಗೆ ಮಾತನಾಡಿ, ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ಗ್ಯಾರಂಟಿ ಯೋಜನೆಗಳ ಅರ್ಜಿಗಳನ್ನು ಸಲ್ಲಿಸಿದರು. ಎಲ್ಲಾ ಅರ್ಜಿಗಳನ್ನು ಸ್ವೀಕರಿಸಿ ಕೇವಲ ಒಂದು ವಾರದ ಒಳಗೆ ಪರಿಹಾರ ಕೊಡಲಾಗುತ್ತದೆ ಎಂದರು.
ನಮ್ಮ ನೂತನ ಪ್ರಯತ್ನಕ್ಕೆ ಸಿಕ್ಕಿರುವ ಈ ಜನಬೆಂಬಲ ಗ್ಯಾರಂಟಿ ಯೋಜನೆಯ ಯಶಸ್ಸನ್ನು ತೋರಿಸುತ್ತದೆ. ಪ್ರತಿ ವಾರದ ನಮ್ಮ ಶಿಬಿರದಲ್ಲಿ ಜನರು ನೀಡುತ್ತಿರುವ ಈ ಬೆಂಬಲ ನಮಗೆ ಇನ್ನಷ್ಟು ಹೆಚ್ಚು ಉತ್ಸಾಹ ನೀಡುತ್ತಿದೆ ಎಂದು ತಿಳಿಸಿದರು.
ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಸದಸ್ಯರು, ಪದ್ಮನಾಭ ನಗರ ವಾರ್ಡಿನ ನಾಯಕರಾದ ಇವೆಂದ್ರ ಬಾಬು ಅವರು ಹಾಗೂ ಗೌಡನ ಪಾಳ್ಯದ ಹಿರಿಯ ಕಾರ್ಯಕರ್ತರು, ಪದಾಧಿಕಾರಿಗಳು ಈ ಶಿಬಿರದಲ್ಲಿ ಭಾಗವಹಿಸಿ ಉತ್ತಮ ಸಹಕಾರ ನೀಡಿ ಕಾರ್ಯಕ್ರಮ ಯಶಸ್ವಿ ಮಾಡಿದರು.

