Happy tips: ವಯಸ್ಸಾದ ಮೇಲೆ ಖುಷಿಯಾಗಿರಬೇಕಾ? ಆಗಿದ್ರೆ ಈ ಅಭ್ಯಾಸಗಳಿಂದ ದೂರ ಇರಿ

Share It

ವಯಸ್ಸು ಕಳೆದಂತೆ ಬದುಕಿನ ಪ್ರತಿ ಕ್ಷಣವನ್ನು ಅನುಭವಿಸಬೇಕು. ಸಂತೋಷದಿಂದ ಕಾಲ ಕಳೆಯಬೇಕು. ನೀವು ಖುಷಿಯಾಗಿರಬೇಕು ಎಂದ್ರೆ ಕೆಲವು ಕೆಟ್ಟ ಅಭ್ಯಾಸಗಳನ್ನ ಕೈ ಬಿಡಬೇಕು. ಆ ಅಭ್ಯಾಸಗಳು ಯಾವುವು ಎಂದು ನೋಡೋಣ ಬನ್ನಿ.

ಹ್ಯಾಕ್ ಸ್ಪಿರಿಟ್‌ನ ಸಂಸ್ಥಾಪಕರಾದ ಲಾಚ್ಲಾನ್ ಬ್ರೌನ್ ಅವರು ವಯಸ್ಸಾಗುತ್ತ ಹೋದಂತೆ ಸಂತೋಷದ ಜೀವನ ನಡೆಸಬೇಕೆಂದರೆ ಈ ಅಭ್ಯಾಸಗಳಿಗೆ ಗುಡ್ ಬೈ ಹೇಳಿ ಎಂದು ಹೇಳುತ್ತಾರೆ.

  1. ಕಳೆದ ದಿನಗಳ ನೆನಪಲ್ಲಿ ಕಾಲ ಕಳೆಯುವುದು.

ಬಹಳ ಮಂದಿ ಈ ತಪ್ಪನ್ನು ಮಾಡುತ್ತಾರೆ. ತಮ್ಮ ಉತ್ತುಂಗದ ಕಾಲವನ್ನು ನೆನೆದು ಪ್ರಸ್ತುತದೊಂದಿಗೆ ಹೋಲಿಸಿಕೊಂಡು ಕೊರಗುತ್ತಾರೆ. ಕಳೆದ ದಿನಗಳ ನೆನಪಿನಲ್ಲಿ ಇರುವುದನ್ನು ಬಿಟ್ಟು ಪ್ರಸ್ತುತಕ್ಕೆ ಹೊಂದಿಕೊಳ್ಳಬೇಕು.

  1. ಸ್ವ ಆರೈಕೆಗೆ ಗಮನ ಕೊಡಿ.

ವಯಸ್ಸಾದ ಮೇಲೆ ನಿಮ್ಮ ಆರೋಗ್ಯವನ್ನು ನೀವೇ ನೋಡಿಕೊಳ್ಳುವುದು ಉತ್ತಮ. ಉತ್ತಮ ಆಹಾರ ಸೇವನೆ, ಸಾಕಾಗುವಷ್ಟು ನಿದ್ದೆ ಮಾಡುವುದು, ಮಾನಸಿಕವಾಗಿ ಸದೃಢವಾಗಿರುವುದು ಇವೆಲ್ಲವೂ ತಾನಾಗಿ ತಾನೇ ರೂಢಿಸಿಕೊಳ್ಳಬೇಕು.

  1. ಭೌತಿಕ ಆಸ್ತಿಗೆ ಗಮನ ಕೊಡಬೇಡಿ.

ಆನಂದ ಎಂಬುದು ನಾವು ಕೂಡಿಟ್ಟ ಹಣದಿಂದ , ಖರೀದಿ ಮಾಡಿದ ಮನೆಯಿಂದ ಬರುವುದಿಲ್ಲ. ಸಂಬಂಧಗಳಿಂದ ನೆರೆ ಹೊರೆಯವರಿಂದ ಸಂತೋಷ್ ಸಿಗುತ್ತದೆ. ಎಲ್ಲರೊಂದಿಗೆ ಸಂತೋಷದಿಂದ ಕಾಲ ಕಳೆಯಿರಿ.

  1. ಅಹಂಕಾರ ಬಿಡುವುದು

ನಾವು ನಮ್ಮ ಅಹಂಕಾರ ಬಿಟ್ಟರೆ ಎಲ್ಲರೂ ನಮ್ಮ ಬಳಿ ಧನಾತ್ಮಕವಾಗಿ ವರ್ತಿಸುತ್ತಾರೆ. ಇದರಿಂದ ನಮ್ಮ ಆರೋಗ್ಯಕ್ಕೂ ಒಳ್ಳೆಯದಾಗುತ್ತದೆ. ವಯಸ್ಸಾದಂತೆ ಅಹಂಕಾರ ಹೆಚ್ಚಾದರೂ ಅದನ್ನು ಹಿತಮಿತ ಇಟ್ಟುಕೊಳ್ಳಬೇಕು.

  1. ದ್ವೇಷ ಸಾಧಿಸುವುದು.

ಮನುಷ್ಯನ ರಕ್ತಗತ ಗುಣಗಳಲ್ಲಿ ಇದು ಒಂದು. ನೀವು ಹಳೆಯ ದ್ವೇಷವನ್ನು ಇಟ್ಟುಕೊಂಡಿದ್ದರೆ ಅದನ್ನು ಮರೆತು ಬಿಡಿ. ಸಾದ್ಯವಾದರೆ ಅವರೊಂದಿಗೆ ಎರಡು ಮಾತನಾಡಿ. ಕ್ಷಮಿಸುವ ಗುಣವನ್ನು ಹೊಂದಬೇಕು. ಆಗ ಸಂತೋಷ ತಾನಾಗಿಯೇ ಬರುತ್ತದೆ.


Share It

You May Have Missed

You cannot copy content of this page