ಸುದ್ದಿ

ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಮತ್ತು ಮಾಡೆಲ್ ನತಾಶಾ ವಿವಾಹ ವಿಚ್ಛೇದನ

Share It

ಮುಂಬೈ: T_20 ವಿಶ್ವಕಪ್ ಫೈನಲ್ ಪಂದ್ಯದ ಹಿರೋ ಹಾರ್ದಿಕ್ ಪಾಂಡ್ಯ ಮತ್ತು ಮಾಡೆಲ್ ನತಾಶಾ ವೈವಾಹಿಕ ಜೀವನ ವಿಚ್ಚೇದನದಲ್ಲಿ ಅಂತ್ಯವಾಗಿದೆ.

ನಾಲ್ಕು ವರ್ಷದ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಹಾರ್ದಿಕ್ ಮತ್ತು ನತಾಶಾಗೆ ಒಬ್ಬ ಮಗನಿದ್ದು, ಆತನ ಖಾಸಗಿತನವನ್ನು ಗೌರವಿಸಿ ಎಂದು ಹಾರ್ದಿಕ್ ಪಾಂಡ್ಯ ಮನವಿ ಮಾಡಿಕೊಂಡಿದ್ದಾರೆ.

ವಿವಾಹ ವಿಚ್ಚೇದನದ ಕುರಿತು ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ದೃಢಪಡಿಸಿರುವ ಹಾರ್ದಿಕ್ ಪಾಂಡ್ಯ, ನಮ್ಮಿಬ್ಬರ ನಾಲ್ಕು ವರ್ಷದ ವಿವಾಹ ಸಂಬಂಧ ಅಂತ್ಯವಾಗಿದೆ. ನಾವಿಬ್ಬರು ಪರಸ್ಪರ ಗೌರವದಿಂದಲೇ ದೂರವಾಗಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ಹಾರ್ದಿಕ್ ವಿವಾಹ ವಿಚ್ಛೇದನದ ಕುರಿತು ಐಪಿಎಲ್ ಸಂದರ್ಭದಲ್ಲಿ ಗುಲ್ಲೆದ್ದಿತ್ತು. ಐಪಿಎಲ್ ಸೋಲು ಮತ್ತು ವಿಚ್ಛೇದನದ ಕುರಿತ ಸುದ್ದಿಗಳು ಹಾರ್ದಿಕ್ ಅವರನ್ನು ಬಹಳವಾಗಿ ಕಾಡಿತ್ತು. ವಿಶ್ವಕಪ್ ಪ್ರವಾಸದಲ್ಲಿ ಇಡೀ ಟೀಂ ಇಂಡಿಯಾ ಕುಟುಂಬದ ಸಮೇತ ಭಾಗವಹಿಸಿದ್ದರೆ, ಹಾರ್ದಿಕ್ ಒಬ್ಬಂಟಿಯಾಗಿದ್ದರು.

ವಿಶ್ವಕಪ್ ಪ್ರದರ್ಶನದ ನಂತರ ಹಾರ್ದಿಕ್ ಬಗ್ಗೆ ಇಡೀ ದೇಶದಲ್ಲಿ ಹೊಸದೊಂದು ರೀತಿಯ ಅಭಿಮಾನ ಮನೆ ಮಾಡಿತ್ತು. ವಿಚ್ಛೇದನದ ಕುರಿತು ಅವರಿಗೆ ಸಾಂತ್ವನದ ಮಾತುಗಳು ಕೇಳಿಬಂದಿದ್ದವು. ಇದೀಗ ಅಧಿಕೃತ ವಿಚ್ಚೇದನ ದ ಘೋಷಣೆ ಹೊರಬಿದ್ದಿದೆ‌


Share It

You cannot copy content of this page