ಆರೋಗ್ಯ ಸುದ್ದಿ

ಉಚಿತ ಆರೋಗ್ಯ ತಪಾಸಣಾ ಶಿಬಿರ ಫೆ. 24 ರಂದು

Share It

ಬೆಳಗಾವಿ : ಮಹಾದ್ವಾರ ರಸ್ತೆಯ ಶಿವಗಿರಿ ಕೋ ಅಪ್ ಕ್ರೆಡಿಟ್ ಸೊಸೈಟಿ, ಬಿಲ್ಲವರ ಅಸೋಸಿಯೇಷನ್ ಮತ್ತು ಆಯು ಫೌಂಡೇಶನ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಫೆ. 24 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆವರೆಗೆ ಶಹಾಪುರ ಎಸ್ ಪಿ ಎಂ ರಸ್ತೆಯ ವಿಶ್ವಕರ್ಮ ದೇವಸ್ಥಾನದ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಮಹಿಳೆಯರಿಗೆ ಕ್ಯಾನ್ಸರ್ ತಪಾಸಣೆ, ಬಾಯಿ ಕ್ಯಾನ್ಸರ್,ಸ್ತನ ಕ್ಯಾನ್ಸರ್, ಗರ್ಭಕೋಶ ಕ್ಯಾನ್ಸರ್ ತಪಾಸಣೆ ಮಾಡಲಾಗುವುದು. ಕಣ್ಣಿನ ತಪಾಸಣೆಯನ್ನು ಮಹಿಳೆಯರು ಮತ್ತು ಪುರುಷರಿಗೆ ಹಮ್ಮಿಕೊಳ್ಳಲಾಗಿದ್ದು ಆಸಕ್ತರು ಮುಂಚಿತವಾಗಿ ತಮ್ಮ ಹೆಸರನ್ನು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 7899651420 ಮತ್ತು 7899662701 ಇಲ್ಲಿ ನೋಂದಾಯಿಸುವಂತೆ ಕೋರಲಾಗಿದೆ.


Share It

You cannot copy content of this page