ದಿನದ 24 ಗಂಟೆ ಫ್ಯಾನ್ ಗಾಳಿ ಬಯಸುತ್ತೀರಾ!! ಆಗಿದ್ರೆ ಇದನ್ನ ಓದಿ
ನಮ್ಮಲ್ಲಿ ಬಹುತೇಕ ಮಂದಿಗೆ ರಾತ್ರಿ ವೇಳೆ ಫ್ಯಾನ್ ಇರಲೇ ಬೇಕು. ಅದರಲ್ಲೂ ಬೇಸಿಗೆಯಲ್ಲಿ 24 ಗಂಟೆ ಫ್ಯಾನ್ ಹಾಕಿಕೊಂಡು ಇರುತ್ತಾರೆ. ಹೀಗೆ ಫ್ಯಾನ್ ಗಾಳಿಯನ್ನು ಕುಡಿಯುವುದರಿಂದ ಅನೇಕ ಸಮಸ್ಯೆಗಳು ಬರುತ್ತವೆ. ನಮ್ಮ ಗಂಟಲಿನಲ್ಲಿ ಕಫ ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಉಸಿರಾಟಕ್ಕೆ ತೊಂದರೆಯಾಗಬಹುದು
ಫ್ಯಾನ್ ಗಾಳಿಯನ್ನು ಕುಡಿಯುವುದರಿಂದ ಕಫ ಹೆಚ್ಚಾಗುವುದರ ಜೊತೆಗೆ ಮೂಗು ಕಟ್ಟಿಕೊಳ್ಳುತ್ತದೆ. ಜೊತೆಗೆ ತಲೆನೋವು, ಗಂಟಲು ನೋವು ಸಹ ಕಾಣಿಸಿಕೊಳ್ಳುತ್ತದೆ.
ಅಲರ್ಜಿ ಮತ್ತು ಅಸ್ತಮಾದ ಸಾಧ್ಯತೆ:
ಫ್ಯಾನ್ ನ ಮೇಲೆ ನಿತ್ಯ ಹೆಚ್ಚಿನ ಪ್ರಮಾಣದ ಧೂಳು ಕುತುಕೊಳ್ಳುತ್ತದೆ. ಅದನ್ನ ಸರಿಯಾಗಿ ಸಮಯಕ್ಕೆ ಸರಿಯಾಗಿ ಸ್ವಚ್ಚ ಗೊಳಿಸದೆ ಇದ್ದರೇ ಅಸ್ತಮಾ ಬರುವ ಸಾಧ್ಯತೆ ಇದೆ.
ಗಾಳಿಯಿಂದ ವೈರಸ್ ಹರಡುವ ಸಾಧ್ಯತೆ
ಮನೆಯಲ್ಲಿ ಯಾರಿಗಾದರೂ ಆರೋಗ್ಯದ ಸಮಸ್ಯೆ ಇದ್ದರೇ ಅವರಿಂದ ಇತರರಿಗೆ ಅಂಟು ರೋಗಗಳು ಹರಡುತ್ತವೆ. ಇದಕ್ಕಾಗಿ ಬಹಳ ಎಚ್ಚರಿಕೆ ವಹಿಸಬೇಕು.
ಕಣ್ಣು ತೇವಾಂಶವನ್ನು ಕಳೆದುಕೊಳ್ಳಬಹುದು.
ಫ್ಯಾನಿನ ಗಾಳಿಯನ್ನು ಕುಡಿಯುವುದರಿಂದ ಕಣ್ಣಿನಲ್ಲಿರುವ ತೇವಾಂಶ ಕಡಿಮೆಯಾಗುತ್ತದೆ. ಹಾಗೆ ನಮ್ಮ ಚರ್ಮದ ತೇವಾಂಶ ಕೂಡ ಕಡಿಮೆಯಾಗುತ್ತದೆ. ದೇಹದಲ್ಲಿ ನಿರ್ಜಲೀಕರಣದ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಫ್ಯಾನ್ ಅನ್ನು ಬಳಸುವ ಮುನ್ನ ಎಚ್ಚರಿಕೆ ವಹಿಸಿ.