ಸುದ್ದಿ

ಕುಸಿದ ಮನೆ ಗೋಡೆ : ಕುಟುಂಬ ಪಾರು

Share It

ಬೆಳಗಾವಿ: ಪಶ್ಚಿಮಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಗೆ ಮನೆಯ ಗೋಡೆ ಕುಸಿದು ಬಿದ್ದ ಪರಿಣಾಮ ಗರ್ಭಿಣಿಯೊಬ್ಬರು ಮಳೆಯಲ್ಲೇ ಜೀವ ಹಿಡಿದುಕೊಂಡು ರಾತ್ರಿ ಕಳೆದಿರುವ ಘಟನೆ ಖಾನಾಪುರ ತಾಲೂಕಿನಲ್ಲಿ ನಡೆದಿದೆ.

ಧಾರಾಕಾರವಾಗಿ ಸುರಿದ ಭಾರೀ ಮಳೆಗೆ ಕಸಮಳಗಿ ಗ್ರಾಮದ ಮನೆಗೆ ಹಾನಿಯಾಗಿದೆ.

ರಾತ್ರಿ ಮಳೆ ಜೋರಾಗಿ ಸುರಿದಿದೆ‌. ಮನೆಯ ಗೋಡೆ ಬಿರುಕು ಬಿಡುವ ಶಬ್ದ ಕೇಳಿದ ತಕ್ಷಣ ಎಲ್ಲರೂ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಅಷ್ಟರಲ್ಲೇ ಗೋಡೆ ಕುಸಿದಿದೆ. ಮನೆಯಲ್ಲಿ ಆರು ಮಂದಿ ವಾಸವಿದ್ದರು. ಏಕಾಏಕಿ ಮನೆಯ ಗೋಡೆ ಕುಸಿದು ಬಿದ್ದ ಪರಿಣಾಮ ಮನೆಯವರು ಇಡೀ ರಾತ್ರಿ ಮಳೆಯಲ್ಲಿಯೇ ಕಳೆದರು.

ಗೋಡೆ ಕುಸಿದು ಬಿದ್ದರೂ ಸ್ಥಳೀಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಂದಗಢ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.


Share It

You cannot copy content of this page