ಬೆಂಗಳೂರಿನಲ್ಲಿ ಭಾರಿ ಮಳೆ : ಆಟೋ ಮೇಲೆ ಮರ ಉರುಳಿ ಚಾಲಕ ಸಾವು
ಬೆಂಗಳೂರು: ಗುರುವಾರ ಸಂಜೆ ಸುರಿದ ಭಾರಿ ಮಳೆಯಿಂದ ಬನಶಂಕರಿ ಮೂರನೇ ಹಂತದಲ್ಲಿ ಆಟೋ ಮೇಲೆ ಮರವೊಂದು ಮುರಿದುಬಿದ್ದು ಆಟೋ ಚಾಲಕ ಮರಣವೊಂದಿರುವ ಘಟನೆ ನಡೆದಿದೆ.
ಆಟೋ ಚಾಲಕನನ್ನು ಮಹೇಶ್ (42) ಎಂದು ಗುರುತಿಸಲಾಗಿದೆ. ನಗರದಲ್ಲಿ ಗುಡುಗು ಸಹಿತ ಭಾರಿ ಮಳೆ ಸುರಿದಿರುವ ಬಗ್ಗೆ ವರದಿಯಾಗಿದೆ. ಮಳೆಯಿಂದಾಗಿ ನಗರದಲ್ಲಿ ಸಂಜೆ ಭಾರಿ ಟ್ರಾಫಿಕ್ ಉಂಟಾಗಿತ್ತು. ನಗರದ ವಿವಿಧ ಪ್ರದೇಶಗಳಲ್ಲಿ ಮರಗಳು ಧರೆಗುರುಳಿದ್ದು ಅನೇಕ ವಾಹನಗಳು ಜಖಂಗೊಂಡಿವೆ.


