ಸುದ್ದಿ

ತಡೆಗೋಡೆ ಕುಸಿದು ಅತಿಥಿಯಾಗಿ ಬಂದಿದ್ದ ಬಾಲಕ ದುರ್ಮರಣ

Share It

ಮಂಗಳೂರು : ತಡೆಗೋಡೆ ಕುಸಿದು ಬಾಲಕ ಮೃತಪಟ್ಟ ಘಟನೆ ಜೋಕಟ್ಟೆ ಬಳಿ ಗುರುವಾರ ಬೆಳಗ್ಗೆ ನಡೆದಿದೆ.

ಮೂಲ್ಕಿ ಕೊಲ್ನಾಡು ಲಿಂಗಪ್ಪಯ್ಯ ಕಾಡು ನಿವಾಸಿ ಶೈಲೇಶ (17)ಮೃತ ಬಾಲಕ. ಜೋಕಟ್ಟೆಯ ತನ್ನ ಸಂಬಂಧಿಕರ ಮನೆಗೆ ಅತಿಥಿಯಾಗಿ ಬಂದಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಬುಧವಾರ ರಾತ್ರಿ ಮಂಗಳೂರು ಭಾಗದಲ್ಲಿ ಭಾರಿ ಮಳೆಯಾಗಿತ್ತು. ಮನೆಯ ಪಕ್ಕದಲ್ಲಿ ತಡೆಗೋಡೆ ಕುಸಿದು ಈ ಅವಘಡ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.


Share It

You cannot copy content of this page