ಉಪಯುಕ್ತ ಸುದ್ದಿ

ರಾಜ್ಯದ 7 ಜಿಲ್ಲೆಗಳಿಗೆ ಮಳೆಯ ರೆಡ್ ಅಲರ್ಟ್!

Share It

ಬೆಂಗಳೂರು: ರಾಜ್ಯದ 7 ಜಿಲ್ಲೆಗಳಲ್ಲಿ ಜೂನ್ 24ರಂದು ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ರೆಡ್​ ಅಲರ್ಟ್​ ಘೋಷಿಸಲಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಕೊಡಗು, ಮೈಸೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ.

ಬೀದರ್​, ಧಾರವಾಡ, ಹಾವೇರಿ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಕೂಡ ಮಳೆಯಾಗಲಿದ್ದು ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ದಾವಣಗೆರೆ, ಪರಶುರಾಂಪುರ, ಹೊನ್ನಾವರ, ಲೋಂಡಾ, ಕೂಡಲಸಂಗಮ, ಚಿಕ್ಕಬಳ್ಳಾಪುರ, ಕುಂದಾಪುರ, ಬೆಳ್ತಂಗಡಿ, ಅಂಕೋಲಾ, ಕೋಟ, ಶಿರಾಲಿ, ಮೂರ್ನಾಡು, ಸಿದ್ದಾಪುರ, ಕಾರ್ಕಳ, ಧರ್ಮಸ್ಥಳ, ಮಾಣಿ, ಮಂಕಿ, ಗೇರುಸೊಪ್ಪ, ಮಹಾಲಿಂಗಪುರ, ಕಮ್ಮರಡಿ, ಗುಬ್ಬಿ, ಆಗುಂಬೆ, ಗೌರಿಬಿದನೂರು, ಭಾಗಮಂಡಲ, ನಾಪೋಕ್ಲು, ಕುಡತಿನಿಯಲ್ಲಿ ಮಳೆಯಾಗಿದೆ.


Share It

You cannot copy content of this page