ಬೆಂಗಳೂರು: ಭಾನುವಾರ ನಡೆದ ಹೆಲಿಕ್ಯಾಪ್ಟರ್ ಅಪಘಾತದಲ್ಲಿ ಇರಾನ್ ಪ್ರಧಾನಿ ಇಬ್ರಾಹಿಂ ರೈಸಿ ಮೃತಪಟ್ಟಿದ್ದಾರೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಭಾನುವಾರ ಇಬ್ರಾಹಿಂ ರೈಸಿ ಪ್ರಯಾಣ ಮಾಡುತ್ತಿದ್ದ ಹೆಲಿಕ್ಯಾಪ್ಟರ್ ನಾಪತ್ತೆಯಾಗಿತ್ತು. ಹಜರ್‌ಬೈನಾನ್ ದೇಶದ ಜಲಾಶಯವೊಂದರ ಉದ್ಘಾಟನೆಗೆ ಆಗಮಿಸಿದ್ದ, ರೈಸಿ ಅಲ್ಲಿಂದ ವಾಪಸ್ ಬರುವ ವೇಳೆ ಹೆಲಿಕ್ಯಾಪ್ಟರ್ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿತ್ತು.
ಹವಾಮಾನ ವೈಪರೀತ್ಯದಿಂದಾಗಿ ಹೆಲಿಕ್ಯಾಪ್ಟರ್ ಪತನವಾಗಿದ್ದು, ಅದರ ಪತ್ತೆಗೆ ಭಾನುವಾರ ಸಾಧ್ಯವಾಗಿರಲಿಲ್ಲ. ಯುರೋಪ್ ರಾಷ್ಟçಗಳು ಸೇರಿದಂತೆ ಅನೇಕ ದೇಶಗಳು ಹೆಲಿಕ್ಯಾಪ್ಟರ್ ಪತ್ತೆ ಕಾರ್ಯಕ್ಕೆ ಸಹಕಾರ ಘೋಷಣೆ ಮಾಡಿದ್ದವು.
ಟರ್ಕಿ ಡ್ರೋನ್, ರೈಸಿ ಇದ್ದ ಹೆಲಿಕ್ಯಾಪ್ಟರ್ ಪತನವಾಗಿರುವ ಜಾಗವನ್ನು ಸೋಮವಾರ ಬೆಳಗ್ಗೆ ಪತ್ತೆ ಮಾಡಿದ್ದು, ರೈಸಿ ಸಾವನ್ನಪ್ಪಿರುವುದನ್ನು ರಕ್ಷಣಾ ಪಡೆಗಳು ಖಚಿತಪಡಿಸಿವೆ. ಇಬ್ರಾಹಿಂ ರೈಸಿ ಜತೆಗೆ ಇರಾನ್‌ನ ವಿದೇಶಾಂಗ ಸಚಿವ ಕೂಡ ಪ್ರಯಾಣ ಮಾಡುತ್ತಿದ್ದರು.
ವಾಯುವ್ಯ ಇರಾನ್‌ನ ಜೋಲ್ಫಾ ವ್ಯಾಪ್ತಿಯ ಕಣಿವೆ ಪ್ರದೇಶದಲ್ಲಿ ಹೆಲಿಕ್ಯಾಪ್ಟರ್ ಪತನವಾಗಿದ್ದು, ಇದೀಗ ರಕ್ಷಣಾ ಪಡೆಗಳು ಆ ಸ್ಥಳವನ್ನು ತಲುಪುವ ಪ್ರಯತ್ನ ನಡೆಸುತ್ತಿವೆ. ಹೆಲಿಕ್ಯಾಪ್ಟರ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿರುವ ಪ್ರದೇಶವನ್ನು ಢ್ರೋಣ್ ಮೂಲಕ ಪತ್ತೆ ಹಚ್ಚಲಾಗಿದೆ.