ರಾಜಕೀಯ ಸುದ್ದಿ

ಹೇಮಾವತಿ ಕೆನಾಲ್ ಲಿಂಕ್ ಖಂಡಿಸಿ ಜೂ.25 ಕ್ಕೆ ತುಮಕೂರು ಬಂದ್

Share It

ತುಮಕೂರು : ಜಿಲ್ಲೆಯ ಮಾಗಡಿ – ತುಮಕೂರು ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ಲಿಂಕ್ ಯೋಜನೆಯನ್ನು ಖಂಡಿಸಿ ಹೇಮಾವತಿ ನೀರಾವರಿ ಸಮಿತಿ ಇದೆ ಜೂ.25 ಕ್ಕೆ ಜಿಲ್ಲಾ ಬಂದ್ಗೆ ಕರೆ ನೀಡಿದೆ.

ಈವರೆಗೆ ಕಾಮಗಾರಿ ನಡೆಯದಂತೆ ತಾತ್ಕಾಲಿಕವಾಗಿ ತಡೆಯಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಗೃಹದ ಮುಂದೆ ಪ್ರತಿಭಟನೆ ಮಾಡಿದ್ದೇವೆ. ಅದನ್ನು ಹತ್ತಿಕ್ಕಲು ಪ್ರಯತ್ನ ಮಾಡಿದ್ದಾರೆ. ಈ ಬಂದ್ ಹೋರಾಟದ ಮುಂದುವರೆದ ಭಾಗ ಎಂದು ಸಮಿತಿಯ ಮುಖ್ಯಸ್ಥರಾದ ಸೊಗಡು ಶಿವಣ್ಣ, ಏಚ್. ನಿಗಂಪ್ಪ, ಎಸ್.ಡಿ, ದಿಲೀಪ್ ಕುಮಾರ್, ಧಾನ್ಯಕುಮಾಾರ್, ಪಂಚಾಕ್ಷರಯ್ಯ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬಂದ್ ಗೆ ಎಲ್ಲ ರಾಜಕೀಯ ಪಕ್ಷಗಳು, ಸಂಘಟನೆಗಳು ಸಹಕರಿಸಲು ಒಪ್ಪಿವೆ. ಶಾಲಾ ಕಾಲೇಜು ಹಾಗೂ ವಾಣಿಜ್ಯ ವಹಿವಾಟನ್ನು ನಿಲ್ಲಿಸಲಾಗಿದೆ. ತುರ್ತು ಸೇವೆಗಳನ್ನು ಮಾತ್ರ ನೀಡಲಾಗುತ್ತದೆ. ಕೆಎಸ್ಆರ್ ಟಿಸಿ ಅಧಿಕಾರಿಗಳಿಗೆ ಬಸ್ ಸಂಚಾರ ಸ್ಥಗಿತಗೊಳಿಸಲು ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.

ಇವರು ನೀರನ್ನು ತೆಗೆದುಕೊಂಡು ಹೋಗುವುದಕ್ಕೆ ವಿರೋಧ ಮಾಡುತ್ತಿಲ್ಲ. ಪೈಪ್ ಲೈನ್ ಮೂಲಕ ನೀರು ತೆಗೆದುಕೊಂಡು ಹೋಗುವುದನ್ನು ವಿರೋಧಿಸುತ್ತೇವೆ. ಜಿಲ್ಲೆಗೆ ಹಂಚಿಕೆಯಾಗಿರುವ ನೀರನ್ನು ಬಿಟ್ಟು ಮಾಗಡಿ ಗೆ ಹಂಚಿಕೆ ಮಾಡಿಕೊಂಡು ಹೋಗಲಿ, ಜಿಲ್ಲೆಗೆ ಕೊಟ್ಟಿರುವ ನೀರನ್ನು ತೆಗೆದುಕೊಂಡು ಹೋಗಲು ಬಿಡುವುದಿಲ್ಲ. ನಮ್ಮ ಜಿಲ್ಲೆಯಲ್ಲಿ ಇಬ್ಬರು ಸಚಿವರಿದ್ದರು ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.

ಪತ್ರಿಕಾ ಗೋಷ್ಠಿಯಲ್ಲಿ ಹೋರಾಟ ಸಮಿತಿಯ ಪ್ರಮುಖರಾದ ಪ್ರಭಾಕರ್, ಕೆ. ಪಿ ಮಹೇಶ್, ಇತರರು ಇದ್ದರು.


Share It

You cannot copy content of this page