ಅಪರಾಧ ಸುದ್ದಿ

ರೈತರಿಗೆ ಭೂ ಸ್ವಾಧೀನ ಪರಿಹಾರ ನೀಡಲು ಹಿಂದೇಟು: ಹೆದ್ದಾರಿ ಪ್ರಾಧಿಕಾರದ ಕಚೇರಿ ಜಪ್ತಿ

Share It

ಧಾರವಾಡ: ರೈತರಿಗೆ ನೀಡಬೇಕಿದ್ದ ಭೂ ಸ್ವಾಧೀನ ಪರಿಹಾರ ಹಣದ ಬಡ್ಡಿ ನೀಡಲು ಹಿಂದೇಟು ಹಾಕಿದ ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದ ಕಚೇರಿಯನ್ನು ಜಪ್ತಿ ಮಾಡುವಂತೆ ನ್ಯಾಯಾಲಯ ಆದೇಶ ಮಾಡಿದೆ.

ಧಾರವಾಡದ ವಿದ್ಯಾನಗರದಲ್ಲಿರುವ ಹೆದ್ದಾರಿ ಯೋಜನಾ ಪ್ರಾಧಿಕಾರದ ನಿರ್ದೇಶಕರ ಕಚೇರಿಗೆ ಅಧಿಕಾರಿಗಳು ಬೀಗಜಡಿದಿದ್ದಾರೆ. ಕಚೇರಿಯಲ್ಲಿರುವ ಪೀಠೋಪಕರಣಗಳು, ಕಂಪ್ಯೂಟರ್ ಮತ್ತಿತರ ವಸ್ತುಗಳನ್ನು ಜಪ್ತಿ ಮಾಡುವಂತೆ ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

ಗದಗದ ರಾಷ್ಟಿçÃಯ ಹೆದ್ದಾರಿ ನಿರ್ಮಾಣಕ್ಕೆ ರೈತರಿಂದ ಪ್ರಾಧಿಕಾರ ಭೂಮಿಯನ್ನು ಪಡೆದುಕೊಂಡಿತ್ತು. ಮೊದಲಿಗೆ ಪ್ರಾಧಿಕಾರದಿಂದ ಕೃಷಿಯೇತರ ಜಮೀನು ಪಡೆಯಲು
ಚ.ಮೀಟರ್‌ಗೆ ೧,೮೦೦ ರು. ನಿಗದಿ ಮಾಡಲಾಗಿತ್ತು. ಪರಿಹಾರ ಕಡಿಮೆಯಾಯ್ತು ಎಂದು ಸುಮಾರು ೨೦ ರೈತರು ಧಾರವಾಡ ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

ಧಾರವಾಡ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ೩,೪೦೦ ರು. ನೀಡುವಂತೆ ನಿಗದಿ ಮಾಡಿ ಆದೇಶ ಮಾಡಲಾಗಿತ್ತು. ಜಿಲ್ಲಾಧಿಕಾರಿಗಳ ಆದೇಶವನ್ನು ಪ್ರಶ್ನಿಸಿದ್ದ ಪ್ರಾಧಿಕಾರ, ಧಾರವಾಡ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು. ಮೇಲ್ಮನವಿಯನ್ನು ತಿರಸ್ಕಾರ ಮಾಡಿದ ನ್ಯಾಯಾಲಯ ಜಿಲ್ಲಾಧಿಕಾರಿಗಳ ಆದೇಶವನ್ನು ಎತ್ತಿ ಹಿಡಿದಿತ್ತು.

ನ್ಯಾಯಾಲಯದ ಆದೇಶದ ನಂತರ ಪ್ರಾಧಿಕಾರ ಎಲ್ಲ ರೈತರಿಗೆ ಪರಿಹಾರದ ಹಣವನ್ನು ಪಾವತಿ ಮಾಡಿತ್ತು. ಆದರೆ, ನ್ಯಾಯಾಲಯದ ಆದೇಶದಂತೆ ಬಡ್ಡಿ ಹಣವನ್ನು ರೈತರಿಗೆ ಪಾವತಿ ಮಾಡಿರಲಿಲ್ಲ. ಹೀಗಾಗಿ, ರೈತರು ನ್ಯಾಯಾಲಯಕ್ಕೆ ಬಡ್ಡಿ ನೀಡುವಂತೆ ಪ್ರಾಧಿಕಾರದ ವಿರುದ್ಧ ಅರ್ಜಿ ಸಲ್ಲಿಕೆ ಮಾಡಿದ್ದರು.

ಪ್ರಾಧಿಕಾರ ೨೦೧೨ರಿಂದ ರೈತರಿಗೆ ಪರಿಹಾರ ಪಾವತಿಯಾಗುವವರೆಗೆ ೧೦ ಕೋಟಿ ಹಣವನ್ನು ಪಾವತಿ ಮಾಡಬೇಕಿದ್ದು, ಅದನ್ನು ಪಾವತಿಸುವಂತೆ ಆದೇಶ ಮಾಡಿದ್ದು, ಇದಕ್ಕೆ ವಿಫಲವಾದ ಪ್ರಾಧಿಕಾರದ ಕಚೇರಿ ಮತ್ತು ಪೀಠೋಪಕರಣಗಳ ಜಪ್ತಿಗೆ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಚೇರಿಗೆ ಬೀಗ ಜಡಿದಿದ್ದಾರೆ.


Share It

You cannot copy content of this page