ಬೆಂಗಳೂರು: ಬೆಂಗಳೂರು ದಕ್ಷಿಣ ಮಹಾನಗರ ಪಾಲಿಕೆಯ ಬೀರೇಶ್ವರ ವಾರ್ಡ್ ಹೆಸರನ್ನು ಚುಂಚಘಟ್ಟ ಎಂಬುದಾಗಿ ಬದಲಾವಣೆ ಮಾಡಬೇಕು ಎಂದು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದವರಿಗೆ ನ್ಯಾಯಾಲಯ 5 ಸಾವಿರ ರು. ದಂಡ ವಿಧಿಸಿದೆ.
ಐತಿಹಾಸಿಕ ಪ್ರಸಿದ್ಧವಾದ ಚುಂಚಘಟ್ಟಕ್ಕೆ ಬದಲಾಗಿ 150 ಮನೆಗಳಿರುವ ಬೀರೇಶ್ವರ ನಗರವನ್ನು ವಾರ್ಡ್ ವ್ಯಾಪ್ತಿಗೆ ಸೇರಿಸಿ, ಅದೇ ಹೆಸರಿನಿಂದ ವಾರ್ಡ್ ಅನ್ನು ಗುರುತಿಸಲಾಗಿದೆ. ಇದರಿಂದ ಚುಂಚಘಟ್ಟದ ಐತಿಹಾಸಿಕ ಹಿನ್ನೆಲೆಗೆ ದಕ್ಕೆಯಾಗಲಿದೆ ಎಂದು ಕೋಣನಕುಂಟೆಯ ರೇಣುಕಾ ಯಲ್ಲಮ್ಮ ದೇವಸ್ಥಾನ ಟ್ರಸ್ಟ್ ಹಾಗೂ ಇತರೆ 20 ಜನರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರಿದ್ದ ಪೀಠ, ವಾರ್ಡ್ ಬದಲಾವಣೆ ಮೂಲಭೂತ ಹಕ್ಕುಗಳ ಉಲ್ಲಂಘಟನೆಯಾಗುವುದಿಲ್ಲ. ಹೀಗಾಗಿ, ವಾರ್ಡ್ ಹೆಸರನ್ನು ಮರು ನಾಮಕರಣ ಮಾಡುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟು, ನ್ಯಾಯಾಲಯದ ಸಮಯ ವ್ಯರ್ಥ ಮಾಡಿದ್ದಕ್ಕೆ 5 ಸಾವಿರ ರು. ದಂಡ ವಿಧಿಸಿದೆ.

