15 ವರ್ಷದೊಳಗಿನವರಿಗೆ ಸೋಷಿಯಲ್ ಮೀಡಿಯಾ ನಿಷೇಧ: ಕೇಂದ್ರಕ್ಕೆ ಹೈಕೋರ್ಟ್ ಆದೇಶ
ಮಧುರೈ(ತಮಿಳುನಾಡು): ಆಸ್ಟ್ರೇಲಿಯಾದಲ್ಲಿ ಮಾದರಿಯಲ್ಲಿ ದೇಶದಲ್ಲಿ ೧೬ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮಗಳ ಪ್ರವೇಶ ನಿಷೇಧಿಸುವುದು ಒಳಿತು ಎಂದು ಮದ್ರಾಸ್ ಹೈಕೋರ್ಟ್ನ ಮಧುರೈ ಪೀಠ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ.
ಎಸ್.ವಿಜಯಕುಮಾರ್ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮಧುರೈ ಪೀಠ ಈ ಕುರಿತು ಆದೇಶ ನೀಡಿದೆ. ಅವರು, “ಅಶ್ಲೀಲ ಚಿತ್ರಗಳು ಅಂತರ್ಜಾಲದಲ್ಲಿ ಮುಕ್ತವಾಗಿ ಲಭ್ಯವಿದೆ. ಪ್ರಸ್ತುತ, ಯಾರಾದರೂ ಅಂತಹ ಅಶ್ಲೀಲ ಚಿತ್ರಗಳನ್ನು ವೀಕ್ಷಿಸಬಹುದು. ಇದು ಮಕ್ಕಳ ಭವಿಷ್ಯವನ್ನು ಅಪಾಯಕ್ಕೆ ಸಿಲುಕಿಸುತ್ತಿವೆ. ಆದ್ದರಿಂದ ರಾಷ್ಟ್ರೀಯ ಮಕ್ಕಳ ರಕ್ಷಣಾ ಕಾಯ್ದೆಯ ಪ್ರಕಾರ ಅಂತಹ ಅಶ್ಲೀಲ ವೀಡಿಯೊಗಳಿಗೆ ಪ್ರವೇಶವನ್ನು ತಡೆಯಲು ಸಾಫ್ಟ್ವೇರ್ ಬಳಸುವಂತೆ ಆದೇಶಿಸಬೇಕು ಎಂದು ಒತ್ತಾಯಿಸಿದ್ದರು.
ಅರ್ಜಿಯನ್ನು ನ್ಯಾಯಮೂರ್ತಿಗಳಾದ ಜಿ.ಜಯಚಂದ್ರನ್ ಮತ್ತು ಕೆ.ಕೆ.ರಾಮಕೃಷ್ಣನ್ ಅವರು ವಿಚಾರಣೆ ನಡೆಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ವಿಷಯದ ಬಗ್ಗೆ ತಮ್ಮ ವಾದಗಳನ್ನು ಮಂಡಿಸಿದವು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, “ಕೇಂದ್ರ ಸರ್ಕಾರ ೨೦೧೭ರಲ್ಲಿ ಹೊರಡಿಸಿದ ಆದೇಶದ ಪ್ರಕಾರ, ಇಂತಹ ವಿವಾದಾತ್ಮಕ ಮತ್ತು ಅಶ್ಲೀಲ ವೀಡಿಯೊಗಳನ್ನು ತಡೆಗಟ್ಟಲು ಮಾರ್ಗಗಳಿವೆ ಎಂದು ದೃಢಪಡಿಸಲಾಗಿದೆ.
ಹೀಗಿದ್ದೂ ಮಕ್ಕಳು ಅಶ್ಲೀಲ ವೀಡಿಯೊಗಳನ್ನು ನೋಡುವುದನ್ನು ಸಂಪೂರ್ಣವಾಗಿ ತಡೆಯಲು ಸಾಫ್ಟ್ವೇರ್ ಅತ್ಯಗತ್ಯ. ಅಂತಹ ಅಶ್ಲೀಲ ಮತ್ತು ಅಸಹ್ಯಕರ ವಿಷಯ ನೋಡುವುದು ಅಥವಾ ತಪ್ಪಿಸುವುದು ವೈಯಕ್ತಿಕ ಆಯ್ಕೆ ಮತ್ತು ಹಕ್ಕಿನ ವಿಷಯವಾಗಿದೆ. ಅದೇನೇ ಇದ್ದರೂ, ಮಕ್ಕಳು ಹೆಚ್ಚು ಅಂತಹ ವೀಡಿಯೊಗಳನ್ನು ವೀಕ್ಷಿಸಿದರೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದರು.”
“ಆದ್ದರಿAದ, ಕೇಂದ್ರ ಸರ್ಕಾರವು ಆಸ್ಟ್ರೇಲಿಯಾದಲ್ಲಿ ಇರುವಂತಹ ನಿಷೇಧವನ್ನು ಜಾರಿಗೆ ತರಬೇಕು. ಇದು ೧೬ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸಾಮಾಜಿಕ ಮಾಧ್ಯಮವನ್ನು ಪ್ರವೇಶಿಸುವುದನ್ನು ನಿರ್ಬಂಧಿಸುತ್ತದೆ. ಅಲ್ಲಿಯವರೆಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಮಕ್ಕಳ ಹಕ್ಕುಗಳ ಆಯೋಗಗಳ ಜೆತೆಗೆ, ಈ ವಿಷಯದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು” ಎಂದು ಆದೇಶಿಸಿದೆ.


