ಅಪರಾಧ ಸಿನಿಮಾ ಸುದ್ದಿ

ನಟಿ ಸಂಜನಾ ಗರ್ಲಾನಿಗೆ ಹೈಕೋರ್ಟ್ ನಿಂದ ಬಿಗ್ ರಿಲೀಫ್

Share It


ಬೆಂಗಳೂರು: ನಟಿ ಸಂಜನಾ ಗರ್ಲಾನಿ ಮತ್ತು ಶಿವಕುಮಾರ್ ಅವರ ವಿರುದ್ಧ ಸಲ್ಲಿಕೆಯಾಗಿದ್ದ ಎಫ್ ಐಆರ್ ರದ್ದುಗೊಳಿಸಿ ಹೈಕೋರ್ಟ್ ಆದೇಶ ನೀಡಿದೆ.

ಡ್ರಗ್ಸ್ ಪ್ರಕರಣದಲ್ಲಿ ಗಂಡ ಹೆಂಡತಿ ಸಿನಿಮಾ ಖ್ಯಾತಿಯ ನಟಿ ಸಂಜನಾ ಗರ್ಲಾನಿ ಸೇರಿದಂತೆ ಡ್ರಗ್ಸ್ ಪೆಡ್ಲರ್ ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಅನಂತರ ಸಂಜನಾ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಕೆಲ ದಿನಗಳ ಕಾಲ ಜೈಲಿನಲ್ಲಿದ್ದು, ಜಾಮೀನು ಪಡೆದು ಹೊರಗೆ ಬಂದಿದ್ದರು.

ಈ ನಡುವೆ ಸಿಸಿಬಿ ಪೊಲೀಸರು, ದಾಖಲು ಮಾಡಿದ್ದ ಎಫ್ಐಆರ್ ರದ್ದು ಮಾಡಬೇಕು ಎಂದು ಸಂಜನಾ ಗರ್ಲಾನಿ ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಏಕಸದಸ್ಯ ಪೀಠ, ಸಂಜನಾ ವಿರುದ್ಧ ದಾಖಲಾಗಿರುವ ಚಾರ್ಜ್ ಶೀಟ್ ಅನ್ನು ರದ್ದುಗೊಳಿಸುವಂತೆ ಆದೇಶ ನೀಡಿದೆ.


Share It

You cannot copy content of this page