ನವಲಗುಂದ: ಬಕ್ರೀದ್ ಅಂಗವಾಗಿ ನಗರದ ಪೊಲೀಸ್ ಠಾಣೆಯ ಆವರಣದಲ್ಲಿ ಹಿಂದೂ-ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ಸಿಪಿಐ ರವಿಕುಮಾರ ಕಪ್ಪತ್ತನವರ ಬಕ್ರೀದ್ ಹಬ್ಬದ ಪ್ರಯುಕ್ತ ಶಾಂತಿ ಸಭೆ ನಡೆಸಿದರು.
ಜೂ.17ರಂದು ನಡೆಯಲಿರುವ ಬಕ್ರೀದ್ ಆಚರಣೆಯನ್ನು ಹಿಂದೂ-ಮುಸ್ಲಿಂ ಸಮುದಾಯದ ಮುಖಂಡರು, ಶಾಂತಿ, ಸೌಹಾರ್ದತೆಯಿಂದ ಹಬ್ಬ ಆಚರಣೆ ಮಾಡುವಂತೆ ಹೇಳಿದರು.
ಹಬ್ಬದ ಸಂದರ್ಭದಲ್ಲಿ ಕಾನೂನು ಉಲ್ಲಂಘಿಸುವುವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಪಟ್ಟಣದ ರಾಯನಗೌಡ್ರ ಪಾಟೀಲ ಮಾತನಾಡಿ, ಹಿಂದಿನಿಂದಲೂ ಪಟ್ಟಣದಲ್ಲಿ ಹಿಂದೂ ಮುಸ್ಲಿಂ ಸಹೋದರರು ಶಾಂತಿ, ಸೌಹಾರ್ದತೆಯಿಂದ ಹಬ್ಬಗಳು ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಮುಂದಿನ ದಿನಗಳಲ್ಲಿಯೂ ಇದೇ ಸಂಸ್ಕೃತಿ ಮುಂದುವರೆಸಿಕೊಂಡು ಹೋಗುವುದಾಗಿ ತಿಳಿಸಿದರು.
ಪಿಎಸ್ಐ ಜನಾರ್ಧನ್ ಭಟ್ರಳ್ಳಿ, ಪುರಸಭೆ ಸದ್ಯಸರಾದ ಮಂಜುನಾಥ ಜಾಧವ, ಮಾಂತೇಶ ಭೋವಿ, ಉಸ್ಮಾನ ಬಬರ್ಚಿ, ಶಿವಾನಂದ ಪಾಚಂಗಿ, ಅಬ್ಬಾಸಲಿ ದೇವರಿಡು, ಸೈಫುದ್ದೀನ ಅವರಾದಿ, ಶಿವಾಜಿ ಕಲಾಲ, ಸಿರಾಜ್ ಧಾರವಾಡ, ಚನ್ನಪ್ಪ ನಾಗರಳ್ಳಿ, ಖಾಜೇಸಾಬ ಹಂಚಿನಾಳ, ರಿಯಾಜ ನಾಶಿಪುಡಿ ಇದ್ದರು.

