ಆರೋಗ್ಯ ಸುದ್ದಿ

Home remedies for Dengue : ಡೆಂಗ್ಯೂ ನಿಂದ ಪಾರಾಗಲು ಇವುಗಳನ್ನ ಬಳಸಿದ್ರೆ ಸಾಕು

Share It

ಮಳೆ ಹೆಚ್ಚಾದಂತೆ ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಸಹ ಹೆಚ್ಚಾಗುತ್ತಿವೆ. ಮುಖ್ಯವಾಗಿ ಮಳೆಗಾಲದಲ್ಲಿ ಸೊಳ್ಳೆಗಳು ನೀರಿನಲ್ಲಿ ಹೆಚ್ಚು ಹೆಚ್ಚು ಮೊಟ್ಟೆ ಇಡುತ್ತವೆ. ಅತಿಯಾದ ಸೊಳ್ಳೆಯಿಂದ ಡೆಂಗ್ಯೂ ರೋಗವು ಬರುತ್ತದೆ. ತುಸು ಎಚ್ಚರ ತಪ್ಪಿದರೆ ಸಾವು ಸಂಭವಿಸುವ ಸಾಧ್ಯತೆಯನ್ನು ಕೂಡ ತಳ್ಳಿ ಹಾಕುವಂತಿಲ್ಲ.

ಅತಿಯಾದ ಜ್ವರ, ಕೆಮ್ಮು, ನೆಗಡಿ , ಚರ್ಮದ ದದ್ದು, ವಾಕರಿಕೆ ಹೀಗೆ ಅನೇಕ ಲಕ್ಷಣಗಳು ಡೆಂಗ್ಯೂ ಬಂದಾಗ ಕಾಣಿಸಿಕೊಳ್ಳುತ್ತವೆ. ತುರ್ತಾಗಿ ಡೆಂಗ್ಯೂ ಜ್ವರದಿಂದ ಉಪಶಯನ ಪಡೆಯಲು ಕೆಲ ಮನೆ ಮದ್ದುಗಳನ್ನು ಬಳಕೆ ಮಾಡಬಹುದು. ಇವುಗಳನ್ನು ಬಳಸುವುದರಿಂದ ಡೆಂಗ್ಯೂ ಜ್ವರದ ಪರಿಣಾಮವನ್ನು ತಗ್ಗಿಸಬಹುದು. ಬನ್ನಿ ಆ ಮನೆ ಮದ್ದುಗಳು ಯಾವುವು ಎಂದು ನೋಡುತ್ತ ಹೋಗೋಣ.

ಅಮೃತ ಬಳ್ಳಿ ರಸ.

ಅಮೃತ ಬಳ್ಳಿಯ ರಸದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ. ಹಾಗೂ ಜೀರ್ಣ ಕ್ರಿಯೆ ಗೆ ಸಹಕಾರಿಯಾಗಿದೆ. ಡೆಂಗ್ಯೂ ಜ್ವರದ ವಿರುದ್ಧ ಹೊರಡಲು ಹೆಚ್ಚಿನ ರೋಗ ನಿರೋಧಕ ಶಕ್ತಿಯನ್ನು ಅಮೃತ ಬಳ್ಳಿ ರಸ ನೀಡುತ್ತದೆ. ಒಂದು ಲೋಟ ನೀರಿಗೆ ಅಮೃತ ಬಳ್ಳಿಯ ಕಾಂಡದ ಎರಡು ತುಂಡುಗಳನ್ನು ಹಾಕಿ ಕಾಯಿಸಿ ಕುಡಿಯಿರಿ. ರಕ್ತ ಪ್ಲೇಟ್ ಲೆಟ್ ಗಳ ಸಂಖ್ಯೆಯನ್ನು ಸಹ ವೃದ್ಧಿಸುತ್ತದೆ.

ಪಪ್ಪಾಯ ಎಲೆ ರಸ

ಪಪ್ಪಾಯ ಎಲೆಯ ರಸವನ್ನು ಕುಡಿಯುವುದರಿಂದ ನಮ ರಕ್ತದಲ್ಲಿನ ಪ್ಲೇಟ್ ಲೆಟ್ ಗಳ ಸಂಖ್ಯೆ ಹೆಚ್ಚಾಗುತ್ತದೆ. ಆ ಡೆಂಗ್ಯೂ ಗೆ ವಿರುದ್ಧವಾಗಿ ನಾವು ನಮ್ಮ ದೇಹವನ್ನು ಸಧೃಡ ಮಾಡಬಹುದು. ದಿನಕ್ಕೆ ಎರಡು ಬಾರಿ ಪಪ್ಪಾಯ ಎಲೆಯ ರಸವನ್ನು ಮಾಡಿಕೊಂಡು ಕುಡಿಯಿರಿ.

ಪೇರಳೆ ಹಣ್ಣಿನ ರಸ

ಪೇರಳೆ ಹಣ್ಣು ಹೆಚ್ಚು ಪೋಷಕಾಂಶ ಭರಿತ ಹಣ್ಣಾಗಿದೆ. ಈ ಹಣ್ಣಿನಲ್ಲಿ ವಿಟಮಿನ್ ಸಿ ಅಧಿಕವಾಗಿರುತ್ತದೆ. ನಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸುವ ಜೊತೆ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ದಿನಕ್ಕೆ ಎರಡು ಬಾರಿ ಜ್ಯೂಸ್ ತಯಾರಿಸಿಕೊಂಡು ಕುಡಿಯಬಹುದು. ಅಥವಾ ಒಂದು ಪೇರಳೆ ಹಣ್ಣನ್ನು ತಿಂದರು ಸಾಕು

ಮೆಂತ್ಯ ಬೀಜ

ಇವು ನಮ್ಮ ದೇಹಕ್ಕೆ ಬೇಕಾದ ಫೈಬರ್ ಅಂಶವನ್ನು ಒಳಗೊಂಡಿರುತ್ತವೆ. ಅಲ್ಲದೇ ವಿಟಮಿನ್ ಸಿ ಮತ್ತು ಕೆ ಅಂಶಗಳು ಸಹ ಇರುತ್ವೆ. ನಿತ್ಯ ಮೆಂತ್ಯೆ ಬೀಜಗಳನ್ನು ನೆನಸಿಟ್ಟು ಆ ರಸವನ್ನು ಸೇವಿಸಿದರೆ ಸಾಕು. ಒಳ್ಳೆಯ ಫಲಿತಾಂಶವನ್ನು ಪಡೆಯುವಿರಿ.

ಒಂದು ವೇಳೆ ಜ್ವರ ಹೆಚ್ಚಿದ್ದರೆ ವೈದ್ಯರನ್ನು ಭೇಟಿಯಾಗಿ ಬಳಿಕ ಇವುಗಳನ್ನು ಬಳಕೆ ಮಾಡಿ.


Share It

You cannot copy content of this page