ಈ ವಸ್ತುಗಳನ್ನು ಸೇವಿಸಿದರೆ ಸಾಕು!, ನೆಗಡಿ ಕೆಮ್ಮು ಜ್ವರ ನಿವಾರಣೆಯಾಗುತ್ತದೆ.
ಮಳೆಗಾಲ ಬಂತೆಂದರೆ ಸಾಕು ಎಲ್ಲರೂ ನೆಗಡಿ ಕೆಮ್ಮು ಮತ್ತು ಜ್ವರ ಕಾಡಲು ಶುರು ಮಾಡುತ್ತದೆ. ಇದರಿಂದ ಸಾಕಷ್ಟು ಮಂದಿ ಹಿಂಸೆಗೆ ಒಳಗಾಗುತ್ತಾರೆ. ಕೆಲವರು ವೈದ್ಯರ ಬಳಿಯೂ ಹೋಗಿ ಸಾವಿರಾರು ರೂಪಾಯಿಯನ್ನು ಕರ್ಚು ಮಾಡುತ್ತಾರೆ. ಆದ್ರೆ ಮನೆಯಲ್ಲಿಯೇ ಇವುಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಆಗಿದ್ರೆ ಹೇಗೆ ಪರಿಹಾರ ಕಂಡುಕೊಳ್ಳುವುದು ಅಂತ ನೋಡೋಣ ಬನ್ನಿ.
ನಮಗೆ ಕೆಮ್ಮು ಬಂದ್ರೆ ಅದು ಬೇಗನೆ ವಾಸಿಯಾಗುವ ಸಾಧ್ಯತೆ ತುಂಬಾ ಕಡಿಮೆ. ಇದರಿಂದ ಕಫ ಸಹ ಹೆಚ್ಚುವ ಸಾಧ್ಯತೆ ಇರುತ್ತದೆ. ನೀವು ಜೇನು ತುಪ್ಪವನ್ನು ಬಳಸುವುದರಿಂದ ಕಫ ಕಡಿಮೆಯಾಗುತ್ತದೆ. ಜೊತೆಗೆ ನಿಮ್ಮ ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ರೋಗಾಣಗಳಿಂದ ಹರಡುವ ಕಾಯಿಲೆಯಿಂದ ರಕ್ಷಿಸುತ್ತದೆ.
ತಲೆ ನೋವು ಬಂದರೆ ಅಥವಾ ನೆಗಡಿ ಕೆಮ್ಮು ಶೀತ ಆದಾಗ 2 ಚಮಚ ದಷ್ಟು ಜೇನು ತುಪ್ಪವನ್ನು ಒಂದು ಲೋಟ ಬಿಸಿ ನೀರಿಗೆ ಸೇರಿಸಿ ಕುಡಿಯುವುದರಿಂದ ಇವು ಕಡಿಮೆಯಾಗುತ್ತವೆ.
ಜೊತೆಗೆ ಹಸಿ ಶುಂಠಿಯನ್ನು ತಿನ್ನುವುದರಿಂದ ಸಾಕಷ್ಟು ಲಾಭಗಳಿವೆ. ಶುಂಠಿಯನ್ನು ಹಾಗೆಯೇ ತಿನ್ನಬಹುದು ಅಥವಾ ರಸವನ್ನು ತೆಗೆದು ಕುಡಿಯಬಹುದು.
ನಿಮ್ಮ ಮನೆಯಲ್ಲಿ ಇರುವ ಕಾಳುಮೆಣಸನ್ನು ಪುಡಿ ಮಾಡಿಕೊಂಡು ಜೇನು ತುಪ್ಪದ ಜೊತೆ ಬೆರೆಸಿಕೊಂಡು ತಿಂದರೆ ಈ ಸಮಸ್ಯೆ ಬೇಗನೆ ದೂರಾಗುತ್ತವೆ.