ಗೋವಾ-ಬೆಂಗಳೂರು ರೈಲಿನಲ್ಲಿ ಪುಂಡಾಟ : ಆರ್‌ಪಿಎಫ್ ಸಿಬ್ಬಂದಿ ಮೇಲೆ ಹಲ್ಲೆ ಆರೋಪ
ಬೆಂಗಳೂರು: ಗೋವಾಗೆ ಹೊರಟಿದ್ದ ವಾಸ್ಕೋ ಡಿ ಗಾಮಾ ರೈಲಿನಲ್ಲಿ ಪುಂಡರ ರಂಪಾಟದಿAದಾಗಿ ರೈಲು ತಡೆವಾಗಿ ಚಲಿಸಿದ ಘಟನೆ ನಡೆದಿದೆ. ಕಿಡಿಗೇಡಿಗಳ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಬೆಂಗಳೂರಿನಿAದ ಗೋವಾಗೆ ಹೊರಟ ರೈಲಿನಲ್ಲಿ ಇದ್ದಕ್ಕಿದ್ದಂತೆ ಚೈನ್ ಎಳೆದ ಕಿಡಿಗೇಡಿಗಳು ಇದನ್ನು ಪ್ರಶ್ನೆ ಮಾಡಿದ ಆರ್‌ಪಿಎಫ್ ಸಿಬ್ಬಂದಿಯ ಮೇಲೆ ರಂಪಾಟ ನಡೆಸಿದರು. ಸಿಬ್ಬಂದಿಯ ಮೇಲೆ ಹಲ್ಲೆಗೆ ಮುಂದಾಗಿದ್ದು, ಇದರಿಂದ ಕೆಲಕಾಲ ರೈಲಿನಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಇದಕ್ಕೆ ಸಂಬAಧಿಸಿದAತೆ ಯಶವಂತಪುರ ರೈಲ್ವೆ ಪೊಲೀಸ್ ಠಾಣೆಗೆ ದೂರು ಮೂವರ ವಿರುದ್ಧ ದೂರು ನೀಡಿದ್ದು, ಎಫ್ ಐಆರ್ ದಾಖಲಿಸಿದ ರೈಲ್ವೆ ಪೊಲೀಸರು, ಮೂವರನ್ನು ವಶಕ್ಕೆ ಪಡೆದಿದ್ದಾರೆ. ಇದರಿಂದಾಗಿ ರೈಲು ಸ್ವಲ್ಪ ಸಮಯ ತಡವಾಗಿ ಹೊರಟಿತು ಎಂದು ಮಾಹಿತಿ ಲಭ್ಯವಾಗಿದೆ.


