ಅಪರಾಧ ಸುದ್ದಿ

Hoskote: ವಂಚಕರ ಬಂಧನ; 8 ಕೆಜಿ ಚಿನ್ನ, 63 ಲಕ್ಷ ನಗದು ವಶ

Share It

ವರದಿ ನಾರಾಯಣಸ್ವಾಮಿ ಸಿ.ಎಸ್

ಹೊಸಕೋಟೆ : ಅಸಲಿ ಚಿನ್ನವೆಂದು ನಂಬಿಸಿ ನಕಲಿ ಚಿನ್ನ ನೀಡಿ ಲಕ್ಷಾಂ ತರ ರು. ಪಡೆದು ವಂಚಿಸಿದ್ದ ಅಂತರ ಜಿಲ್ಲಾ ಆರೋಪಿ ಗಳನ್ನು ನಕಲಿ ಚಿನ್ನದ ಸಮೇತ ಹಣವನ್ನು ವಶಕ್ಕೆ ಪಡೆ ಯುವಲ್ಲಿ ಹೊಸಕೋಟೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಜಿ.ರಾಜೇಶ್ (27), ಎಸ್.ಬನ್ನಿ(21), ಸಿ.ಸಂಪತ್ (35), ಎಸ್.ಕಲ್ಯಾಣ್ (25), ಬಾಯಕೊಂಡ(23) ಬಂಧಿತ ಐವರು ಆರೋಪಿಗಳಾಗಿದ್ದು ಎಲ್ಲರೂ ಕೋ ಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ, ರಾಯ ಲ್ಪಡು ಬಳಿಯಿರುವ ಹಕ್ಕಿಪಿಕ್ಕಿ ಕಾಲೋನಿಯ ವಾಸಿಗ ಳಾಗಿದ್ದಾರೆ. ಬಂಧಿತರಿಂದ 63 ಲಕ್ಷ ರು. ನಗದು, ಸುಮಾರು 8 ಕೆಜಿ ನಕಲಿ ಚಿನ್ನ, 2 ಲಾಂಗ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಕ್ಕೆ ಪಡೆಯಲಾಗಿದೆ.

ಇತ್ತೀಚೆಗೆ ಹೊಸಕೋಟೆ ವ್ಯಾಪ್ತಿ ಚಿಂತಾಮಣಿ ರಸ್ತೆಯ ಬಳಿ ಬಳ್ಳಾರಿ ವಾಸಿ ಸಂತೋಷ್ ಎಂಬ ವ್ಯಕ್ತಿಗೆ ಅಸಲಿ ಚಿನ್ನ ಕೊಡುತ್ತೇವೆ ಎಂದು ಹೇಳಿ ನಕಲಿ ಚಿನ್ನ ಕೊಟ್ಟು 15 ಲಕ್ಷ ರು.ಗಳನ್ನು ಪಡೆದು ವಂಚಿಸಿ ಪರಾರಿಯಾಗಿದ್ದ ಬಗ್ಗೆ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಆರೋಪಿಗಳು ಮೊದಲಿಗೆ ಫೇಸ್‌ಬುಕ್ ಮತ್ತು ಇನ್ ಸ್ಟಗ್ರಾಮ್‌ನಲ್ಲಿ ಪೋನ್ ನಂಬರ್‌ಗಳನ್ನು ಹುಡುಕಿ ಪಡೆದು ಅವರನ್ನು ಪರಿಚಯ ಮಾಡಿಕೊಳ್ಳುತ್ತಾರೆ. ನಂತರ ನಾವು ಕೇರಳದ ಜಮೀನುಗಳಲ್ಲಿ ಜೆಸಿಬಿ ಕೆಲಸ ಮಾಡುತ್ತಿದ್ದಾಗ, ಪುರಾತನ ಕಾಲದ ಚಿನ್ನ ಹಾರ ಸಿಕ್ಕಿದ್ದು, ಅದನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತೇವೆ ಎಂದು ಅವರಿಗೆ ವಿಡಿಯೋ ಮೂಲಕನಕಲಿ ಹಾರ ತೋರಿಸುತ್ತಾರೆ. ಅವರನ್ನು ನಂಬಿ ಹೋದ ವ್ಯಕ್ತಿಗಳಿಗೆ ಆ ಹಾರ ತೋರಿಸಿ. ಮೊದಲೇ ಪ್ಲಾನ್ ಮಾಡಿದಂತೆ ನಕಲಿ ಹಾರಕ್ಕೆ ಜೋಡಿಸಿದ್ದ ಎರಡು ಅಸಲಿ ಚಿನ್ನದ ಗುಂಡುಗಳನ್ನು ಚೆಕ್ ಮಾಡಿಕೊಂಡು ಹಣ ತರುವಂತೆ ತಿಳಿಸುತ್ತಾರೆ. ಹಣ ಇರುವ ಬಗ್ಗೆ ಖಚಿತ ಪಡಿಸಿಕೊಂಡು ತಾವು ಹೇಳಿದ ಕಡೆ ಆ ವ್ಯಕ್ತಿಗಳನ್ನು ಕರೆಸಿಕೊಂಡು ನಕಲಿ ಚಿನ್ನವನ್ನು ಅಸಲಿಯೆಂದು ನಂಬಿಸಿ ಹಣ ಪಡೆದು ಪರಾರಿಯಾಗುತ್ತಿದ್ದರು. ಇದರಂತೆ ಈ ಆರೋಪಿಗಳು ಅನೇಕ ವ್ಯಕ್ತಿಗಳಿಗೆ ವಂಚಿಸಿರುವುದು ಕಂಡು ಬಂದಿದ್ದು, ಹೊಸಕೋಟೆ ಠಾಣಾ ವ್ಯಾಪ್ತಿಯಲ್ಲಿ 4 ಪ್ರಕರಣಗಳು, ನಂದಗುಡಿ ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳು, ಶಿಡ್ಲಘಟ್ಟ ಠಾಣೆಯಲ್ಲಿ 1 ಪ್ರಕರಣ ಸೇರಿ ಒಟ್ಟು 7 ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.

ಎಸ್ಪಿ ಸಿ.ಕೆ. ಬಾಬಾ, ಎಎಸ್ಪಿ ಡಾ. ಎಚ್.ಎನ್. ವೆಂಕಟೇಶ್ ಪ್ರಸನ್ನ, ಕೆ.ಎಸ್.ನಾಗರಾಜ್‌ರವರ ಮಾರ್ಗದರ್ಶನದಲ್ಲಿ ಹೊಸಕೋಟೆ ಉಪ ವಿಭಾಗದ ಡಿವೈಎಸ್ ಪಿ ಮಲ್ಲೇಶ್ ಎಂ. ಹಾಗೂ ಇನ್ಸಪೆಕ್ಟರ್ ಗೋವಿಂದ್ ಬಿ.ಟಿ ರವರ ನೇತೃತ್ವದಲ್ಲಿ ಪಿಎಸ್ ಐ ಮುನಿರಾಜು, ಎಎಸ್ ಐ ಶಂಕರ್, ವಿ.ಕೆ.ಮಂಜು, ಸಿಬ್ಬಂದಿ ದತ್ತಾತ್ರೇಯ, ರಮೇಶ್, ಧನಶೇಖ‌ರ್, ವನಿತಾ, ಗೋಪಾಲಕೃಷ್ಣ, ನಾರಾಯಣನ್, ಜಗನ್ನಾಥ, ಅಂಬರೀಷ್, ಬಸವರಾಜ್ ಬಕಾಲಿ, ಮಂಜುನಾಥ ಅಕ್ಕಿ, ಮಹಾಂತಪ್ಪ ಬಿರದಾರ ಹಾಗೂ ಇತರರುಕಾರ್ಯಾಚರಣೆಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಎಲ್ಲಾ ಸಿಬ್ಬಂದಿಗೆ ಕೇಂದ್ರ ವಲಯದ ಐಜಿಪಿ ಲಾಭುರಾಮ್‌ ಅಭಿನಂದಿಸಿದ್ದಾರೆ.


Share It

You cannot copy content of this page