ಹಾಸ್ಟೆಲ್ಗೆ ಬೆಂಕಿ-ಎಂಟು ವಿದ್ಯಾರ್ಥಿಗಳಿಗೆ ಗಾಯ:
ನವದೆಹಲಿ: ಹಾಸ್ಟೆಲ್ನಲ್ಲಿ ಕಾಣಿಸಿಕೊಂಡ ಬೆಂಕಿಯ ಪರಿಣಾಮ ಎಂಟು ವಿದ್ಯಾಥರ್ಿಗಳು ಗಾಯಗೊಂಡಿರುವ ಘಟನೆ ಕೋಟಾ ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿನ ಬಾಲಕರ ಹಾಸ್ಟೆಲ್ ಕಟ್ಟಡದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಎಂಟು ಜನ ವಿದ್ಯಾಥರ್ಿಗಳು ಗಾಯಗೊಂಡಿದ್ದಾರೆ. ಶಾಟರ್್ ಸಕ್ಯರ್ೂಟ್ನಿಂದ ಬೆಂಕಿ ಹೊತ್ತಿಕೊಂಡಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುನ್ಹಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಲ್ಯಾಂಡ್ಮಾಕರ್್ ಸಿಟಿಯಲ್ಲಿ ಬೆಳಗ್ಗೆ 6.15ರ ಸುಮಾರಿಗೆ ಈ ಘಟನೆ ನಡೆದಿದೆ. ಐದು ಅಂತಸ್ತಿನ ಹಾಸ್ಟೆಲ್ ಕಟ್ಟಡದ ನೆಲ ಮಹಡಿಯಲ್ಲಿ ಅಳವಡಿಸಲಾದ ವಿದ್ಯುತ್ ಟ್ರಾನ್ಸ್ಫಾರ್ಮರ್ನಲ್ಲಿ ಶಾಟರ್್ ಸಕ್ಯರ್ೂಟ್ ಉಂಟಾಗಿದೆ. ನಂತರ ಬೆಂಕಿ ಕಾಣಿಸಿಕೊಂಡಿದೆ. ಹೀಗಾಗಿ ಓರ್ವ ವಿದ್ಯಾಥರ್ಿ ತೀವ್ರವಾಗಿ ಸುಟ್ಟುಗಾಯಗೊಂಡಿದ್ದು, ಇತರ ಆರು ವಿದ್ಯಾಥರ್ಿಗಳು ಗಾಯಗೊಂಡಿದ್ದಾರೆ. ಇದೇ ವೇಳೆ, ಬೆಂಕಿಯಿಂದ ತಪ್ಪಿಸಿಕೊಳ್ಳಲು ಇತರ 14 ಮಂದಿ ಕಟ್ಟಡದ ಮೊದಲ ಮಹಡಿಯಿಂದ ಜಿಗಿದಿದ್ದಾರೆ. ಇದರಿಂದ ಒಬ್ಬ ವಿದ್ಯಾಥರ್ಿ ಕಾಲು ಮುರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಾಸ್ಟೆಲ್ ಕಟ್ಟಡವು ಅಗ್ನಿ ಸುರಕ್ಷತಾ ಕ್ರಮಗಳನ್ನು ಹೊಂದಿಲ್ಲ. ಅಗ್ನಿಶಾಮಕ ಎನ್ಒಸಿ ಹೊಂದಿಲ್ಲ. ಹಾಸ್ಟೆಲ್ ಕಟ್ಟಡದೊಳಗೆ ಟ್ರಾನ್ಸ್ಫಾರ್ಮರ್ ಅಳವಡಿಸಿರುವುದು ಆತಂಕಕಾರಿಯಾಗಿದೆ ಎಂದು ಕೋಟಾ ಮಹಾನಗರ ಪಾಲಿಕೆಯ ಅಗ್ನಿಶಾಮಕ ಅಧಿಕಾರಿ ರಾಕೇಶ್ ವ್ಯಾಸ್ ಹೇಳಿದ್ದಾರೆ