ಉಪಯುಕ್ತ ಸುದ್ದಿ

SSLC–PUC ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಭರ್ಜರಿ ಪ್ರೋತ್ಸಾಹಧನ!

Share It

SSLC, PUC, ಡಿಗ್ರಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಆರ್ಥಿಕ ಸಹಾಯ ನೀಡುತ್ತಿದೆ. ಪ್ರತಿಭೆ ಇದ್ದರೂ ಹಣದ ಕೊರತೆಯಿಂದ ಉನ್ನತ ಶಿಕ್ಷಣ ಕೈಬಿಡಬಾರದೆಂಬ ಉದ್ದೇಶದಿಂದ ಜಾರಿಗೆ ಬಂದಿರುವ ಈ ಯೋಜನೆಯ ಮೂಲಕ ಅರ್ಹ ವಿದ್ಯಾರ್ಥಿಗಳಿಗೆ ಗರಿಷ್ಠ ₹50,000ವರೆಗೆ ಪ್ರೋತ್ಸಾಹಧನ ದೊರೆಯಲಿದೆ. ಈ ಮಹತ್ವದ ಯೋಜನೆಯೇ ‘ಪ್ರೈಸ್ ಮನಿ ಸ್ಕಾಲರ್‌ಶಿಪ್’.

ಈ ಯೋಜನೆ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದೊಡ್ಡ ಬೆಂಬಲವಾಗಿದ್ದು, ಅವರ ಶೈಕ್ಷಣಿಕ ಸಾಧನೆಯನ್ನು ಗೌರವಿಸುವುದರ ಜೊತೆಗೆ ಮುಂದಿನ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡುತ್ತದೆ.

ಪ್ರೈಸ್ ಮನಿ ಸ್ಕಾಲರ್‌ಶಿಪ್ ಎಂದರೇನು?

ಕರ್ನಾಟಕ ರಾಜ್ಯ ಸರ್ಕಾರದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಜಾರಿಗೊಳಿಸಿರುವ ‘ಪ್ರೈಸ್ ಮನಿ ಸ್ಕಾಲರ್‌ಶಿಪ್’ ಯೋಜನೆಯು SSLC, PUC, ಡಿಗ್ರಿ ಹಾಗೂ PG ಹಂತದಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಹಣಕಾಸು ನೆರವು ನೀಡುವ ಉದ್ದೇಶ ಹೊಂದಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನೇ ಮಾನದಂಡವಾಗಿಟ್ಟುಕೊಂಡುಅವರ ಮುಂದಿನ ಉನ್ನತ ಶಿಕ್ಷಣಕ್ಕೆ ಸಹಕಾರ ನೀಡುವುದು ಈ ಯೋಜನೆಯ ಮೂಲ ಆಶಯ.

ಹಣ ವಿತರಣೆ ಹೇಗೆ ನಡೆಯುತ್ತದೆ?

ಸರ್ಕಾರದ ಇತರೆ ಗ್ಯಾರಂಟಿ ಯೋಜನೆಗಳಂತೆ, ಈ ಯೋಜನೆಯಲ್ಲೂ ಯಾವುದೇ ಮಧ್ಯವರ್ತಿಗಳಿಲ್ಲ. ಪ್ರೈಸ್ ಮನಿ ಸ್ಕಾಲರ್‌ಶಿಪ್‌ನ ಮೊತ್ತವನ್ನು ನೇರವಾಗಿ ಅರ್ಹ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಇದರಿಂದ ಪಾರದರ್ಶಕತೆ ಮತ್ತು ಸಮಯಕ್ಕೆ ಸರಿಯಾದ ಹಣ ವಿತರಣೆ ಸಾಧ್ಯವಾಗುತ್ತದೆ.

ಯಾವ ಕೋರ್ಸ್‌ಗೆ ಎಷ್ಟು ಪ್ರೋತ್ಸಾಹಧನ?

ವಿದ್ಯಾರ್ಥಿಗಳು ಉತ್ತೀರ್ಣರಾದ ಹಂತ ಮತ್ತು ಪಡೆದ ಅಂಕಗಳ ಆಧಾರದಲ್ಲಿ ಪ್ರೋತ್ಸಾಹಧನ ನಿಗದಿಯಾಗಿದೆ.

SSLC (10ನೇ ತರಗತಿ)

ಶೇ. 60–75 ಅಂಕ: ₹7,500

ಶೇ. 75ಕ್ಕಿಂತ ಹೆಚ್ಚು ಅಂಕ: ₹15,000

PUC / ಡಿಪ್ಲೊಮಾ: ₹20,000

ಪದವಿ (Degree): ₹25,000

ಸ್ನಾತಕೋತ್ತರ ಪದವಿ (PG): ₹30,000

ವೃತ್ತಿಪರ ಕೋರ್ಸ್‌ಗಳು (ವೈದ್ಯಕೀಯ, ಇಂಜಿನಿಯರಿಂಗ್, ಕೃಷಿ, ಪಶುವೈದ್ಯಕೀಯ): ₹35,000

ವಿಶ್ವವಿದ್ಯಾಲಯ ಮಟ್ಟದ PG ಕೋರ್ಸ್‌ಗಳಲ್ಲಿ 1ರಿಂದ 5ನೇ ರ್ಯಾಂಕ್: ₹50,000

ಅರ್ಹತಾ ಮಾನದಂಡಗಳು:

  1. ವಿದ್ಯಾರ್ಥಿ ಕರ್ನಾಟಕ ರಾಜ್ಯದ ನಿವಾಸಿ ಆಗಿರಬೇಕು
  2. ಪರಿಶಿಷ್ಟ ಪಂಗಡ (ST)ಕ್ಕೆ ಸೇರಿದವರಾಗಿರಬೇಕು
  3. SSLCದಿಂದ ವೃತ್ತಿಪರ ಪದವಿವರೆಗೆ ಎಲ್ಲಾ ಪರೀಕ್ಷೆಗಳನ್ನು ಪ್ರಥಮ ಪ್ರಯತ್ನದಲ್ಲೇ ಮತ್ತು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು.

ಪ್ರತಿಭೆಗೆ ಬೆಲೆ ಕೊಡುವ ಈ ಪ್ರೈಸ್ ಮನಿ ಸ್ಕಾಲರ್‌ಶಿಪ್ ಯೋಜನೆ, ಉನ್ನತ ಶಿಕ್ಷಣದ ಕನಸು ಕಾಣುವ ಅನೇಕ ವಿದ್ಯಾರ್ಥಿಗಳಿಗೆ ಹೊಸ ಆಶಾಕಿರಣವಾಗುತ್ತಿದೆ.


Share It

You cannot copy content of this page