ಮನೆಯೊಳಗೆ ನೂರು ಮೀಟರ್ ಸುರಂಗ ಮಾರ್ಗ: ಉತ್ತರ ಪ್ರದೇಶದ ಡ್ರಗ್ ಮಾಫಿಯಾದ ಕರಾಮತ್ತು !
ಬರೇಲಿ: ಡ್ರಗ್ ಫೆಡ್ಲರ್ ಪೊಲೀಸ್ ರೈಡ್‌ನಿಂದ ತಪ್ಪಿಸಿಕೊಳ್ಳಲು ತನ್ನ ಮನೆಯೊಳಗೆ ನೂರು ಮೀಟರ್ ಸುರಂಗ ಮಾಡಿಕೊಂಡಿರುವುದನ್ನು ಕಂಡ ಉತ್ತರ ಪ್ರದೇಶದ ಪೊಲೀಸರು ಹೌಹಾರಿದ್ದಾರೆ.
ಶಹಬ್ಜಾದ್ ಖಾನ್ ಎಂಬಾತನನ್ನು ಯುಪಿ ಪೊಲೀಸರು ಬಂಧಿಸಿದ್ದು, ಆತನ ವಿಚಾರಣೆಗೆ ಕರೆದೊಯ್ದಾಗ ಮನೆಯಲ್ಲಿದ್ದ ಸುರಂಗ ಮಾರ್ಗವನ್ನು ಕಂಡು ಅಚ್ಚರಿಗೊಂಡಿದ್ದಾರೆ. ಆತನ ತಂದೆ ತಸ್ಲೀಮ್ ಖಾನ್‌ಮನೆಯಲ್ಲಿಯೇ ಡ್ರಗ್ ವ್ಯವಹಾರಕ್ಕೆ ಸೂಕ್ತ ವ್ಯವಸ್ಥೆ ನಿರ್ಮಾಣ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಮೀರತ್ ಪೊಲೀಸರು, ಶಹಬ್ಜಾದ್ ಖಾನ್ ಹಾಗೂ ಆತನ ಸಹಚರ ಮಹವiದ್ ಸಲ್ಮಾನ್ ನನ್ನು ಬಂಧಿಸಿ, ೫೩೦ ಗ್ರಾಂ ಮಾಧಕದ್ರವ್ಯವನ್ನು ವಶಪಡಿಸಿಕೊಂಡಿದ್ದುಯ, ಎನ್‌ಡಿಪಿಎಸ್ ಕಾಯ್ದೆಯ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದರು. ಅವರನ್ನು ವಿಚಾರಣೆಗೆ ಕರೆದೊಯ್ದ ವೇಳೆ ಸುರಂಗ ಮಾರ್ಗ ಪತ್ತೆಯಾಗಿದೆ.
ಪ್ರಕರಣದ ಪ್ರಮುಖ ಆರೋಪಿ ತಸ್ಲೀಮ್ ಖಾನ್ ಎನ್ನಲಾಗಿದ್ದು, ಆತ ಪೊಲೀಸರ ರೈಡ್‌ನ ಸೂಚನೆ ಅರಿತು ಪರಾರಿಯಾಗಿದ್ದಾನೆ ಎನ್ನಲಾಗಿದೆ. ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಆತ ಮೂರು ದಶಕಗಳಿಂದ ಡ್ರಗ್ ಸಿಂಡಿಕೇಟ್ ನಡೆಸುತ್ತಿದ್ದು, ಆತನ ಮೇಲೆ ಹಲವಾರು ಪ್ರಕರಣಗಳಿವೆ ಎನ್ನಲಾಗಿದೆ.


