ಅಪರಾಧ ಸುದ್ದಿ

ಜೊತೆಯಾಗಿದ್ದಾಗಲೇ ಪತ್ನಿ, ಪ್ರಿಯಕರನ ಹತ್ಯೆಗೈದ ಪತಿ ಪೊಲೀಸರ ಶರಣಾದ ಪತಿ

Share It

ಕಲಬುರಗಿ:ಪ್ರಿಯಕರನ ಜೊತೆ ಪತ್ನಿಯನ್ನು ಕಂಡು ಕುಪಿತಗೊಂಡ ಪತಿ, ಇಬ್ಬರನ್ನು ಕೊಂದು ಬಳಿಕ ಪೊಲೀಸರಿಗೆ ಶರಣಾಗಿರುವ ಘಟನೆ ಕಲಬುರ್ಗಿ ಜಿಲ್ಲೆಯ ಆಳ ತಾಲೂಕಿನ ಮಾದನ ಹಿಪ್ಪರಗ ಎಂಬ ಗ್ರಾಮದಲ್ಲಿ ನಡೆದಿದೆ.

ಅನೈತಿಕ ಸಂಬಂಧ ಶಂಕೆಯಿಂದ ಪತ್ನಿ, ಆಕೆಯ ಪ್ರಿಯಕರನನ್ನು ಪತಿಯ ಹತ್ಯೆ ಮಾಡಿದ ಘಟನೆ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಮಾದನಹಿಪ್ಪರಗಾ ಗ್ರಾಮದಲ್ಲಿ ಘಟನೆ ನಡೆದಿದೆ. ಕೊಲೆಯಾದವರನ್ನಯ ಪ್ರಿಯಕರ ಕಾಜಪ್ಪ(22), ಪತ್ನಿ ಸೃಷ್ಟಿ (22) ಎಂದು ಗುರುತಿಸಲಾಗಿದೆ. ಅವರನ್ನು ಪತಿ ಶ್ರೀಮಂತ್ ಕೊಲೆ ಮಾಡಿದ್ದಾನೆ.

ಪತ್ನಿಯ ಜೊತೆಗೆ ಕಾಜಪ್ಪ ಇದ್ದುದನ್ನು ಕಂಡು ಕೆಂಡಕಾರಿದ ಶ್ರೀಮಂತ್ ಇಬ್ಬರನ್ನು ಹತ್ಯೆಗೈದು, ನಂತರ ಪೋಲಿಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಎರಡು ವರ್ಷಗಳ ಹಿಂದೆಯಷ್ಟೇ ಸೃಷ್ಟಿಯನ್ನು ಶ್ರೀಮಂತ್ ಮದುವೆಯಾಗಿದ್ದ. ಆದರೆ ಸೃಷ್ಟಿ ಪರ ಪುರುಷನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಘಟನೆ ನಡೆದ ಸ್ಥಳಕ್ಕೆ ಮಾದನಹಿಪ್ಪರಗಾ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Share It

You cannot copy content of this page