ಬೆಂಗಳೂರು: ನಟಿ ಸಪ್ತಮಿ ಗೌಡ ಜತೆಗೆ ಸಂಬಂಧವಿರುವ ಕಾರಣಕ್ಕೆ ನನಗೆ ಡೈವೋರ್ಸ್ ಕೊಡಲು ಮುಂದಾಗಿದ್ದಾರೆ ಎಂಬ ನಟ ಯುವ ಪತ್ನಿ ಹೇಳಿಕೆಗೆ ಪುಷ್ಠಿ ನೀಡುವಂತೆ ಸಪ್ತಮಿ ಗೌಡ ಅವರದ್ದು ಎಂಬ ಆಡಿಯೋ ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಆಡಿಯೋದಲ್ಲಿ, ಯುವ ಜತೆಗೆ ನಾನು ಮೊದಲಿಂದ ಸಲುಗೆಯಿಂದೇನೂ ಇರಲಿಲ್ಲ, ಆತ ತನ್ನ ಕತೆಯನ್ನೆಲ್ಲ ಹೇಳಿಕೊಂಡಿದ್ದಕ್ಕೆ ನಾನು ಆತನೊಂದಿಗೆ ಸಲುಗೆ ಬೆಳೆಸಿದೆ. ನನ್ನದು ತಪ್ಪಾಗಿದೆ ಎಂದು ಸಪ್ತಮಿ ಗೌಡ ಮಾತನ್ನಾಡಿದ್ದಾರೆ ಎಂಬ ಆಡಿಯೋ ಹರಿದಾಡುತ್ತಿದೆ.
ನಟ ಯುವ ತಮ್ಮ ಪತ್ನಿ ಶ್ರೀದೇವಿ ಜತೆಗೆ ಡೈವೋರ್ಸ್ ಪಡೆದುಕೊಳ್ಳಲು ಮುಂದಾಗಿರುವ ಪ್ರಕರಣ ಇತ್ತೀಚೆಗೆ ಸದ್ದಾಗಿತ್ತು. ಈ ವೇಳೆ ಶ್ರೀದೇವಿ ಬೈರಪ್ಪ, ತಮ್ಮ ಮತ್ತು ಯುವ ನಡುವಿನ ಸಂಬAಧ ಹಾಳಾಗಲು ಸಪ್ತಮಿ ಗೌಡ ಕಾರಣ ಎಂದು ದೂರಿದ್ದರು. ಜತೆಗೆ, ಅವರಿಬ್ಬರೂ ಹೋಟೆಲ್ ರೂಮಲ್ಲಿ ಸಿಕ್ಕಿಬಿದ್ದಿದ್ದರು ಎಂದು ಆರೋಪಿಸಿದ್ದರು.
ಈ ಆರೋಪದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದ ಸಪ್ತಮಿಗೌಡ, ೧೦ ಕೋಟಿ ರು.ಗಳ ಮಾನನಷ್ಟ ಮೂಕದ್ದಮೆ ದಾಖಲು ಮಾಡಿದ್ದರು. ಜತೆಗೆ ಮುಂದೆ ಇಂತಹ ಆರೋಪಗಳನ್ನು ಮಾಡದಿರುವಂತೆ ತಾಕೀತು ಮಾಡಲು ಕೋರ್ಟ್ ಮೊರೆ ಹೋಗಿದ್ದರು. ಇದೀಗ ಆಡಿಯೋ ವೈರಲ್ ಆಗಿದ್ದು, ಅದು ಸಪ್ತಮಿ ಗೌಡ ಅವರದ್ದೇ ದನಿಯೋ ಅಥವಾ ಅಲ್ಲವೋ ಎಂಬುದೀಗ ಕುತೂಹಲಕ್ಕೆ ಕಾರಣವಾಗಿದೆ.