ರಾಜಕೀಯ ಸುದ್ದಿ

ಹೈಕಮಾಂಡ್ ಮನಸ್ಸು ಮಾಡಿದ್ರೆ ಸಿಎಂ ಆಗ್ತೀನಿ: ಡಾ ಪರಮೇಶ್ವರ್

Share It

ಬೆಂಗಳೂರು: ಎಲ್ಲರಂತೆ ನನಗೂ ಆಸೆಯಿದೆ. ಹೈಕಮಾಂಡ್ ಮನಸ್ಸು ಮಾಡಿದ್ರೆ ಪದೋನ್ನತಿ ಆಗುತ್ತದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ನನಗೆ ಪದೋನ್ನತಿ ನೀಡಬೇಕು ಎನ್ನುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ನಾನು ಈವರೆಗೆ ಆಶಾವಾದಿಯಾಗಿಯೇ ಬದುಕಿದ್ದೇನೆ. ಅದೇನು ಹೊಸದಾಗಿ ಆಗಬೇಕು ಎಂದೇನಿಲ್ಲ, ಎಲ್ಲರಿಗೂ ಆಸೆ ಇದ್ದೇ ಇರುತ್ತದೆ, ಎಂತೆಯೂ ನನಗೂ ಆಕಾಂಕ್ಷೆಯಿದೆ ಎಂದರು.

ಪ್ರಸ್ತುತ ಸನ್ನಿವೇಶದಲ್ಲಿ ಯಾರಿಗೆ ವಾತಾವರಣ ಪೂರಕವಾಗಿದೆ, ಯಾರಿಗೆ ಪೂರಕವಾಗಿಲ್ಲ ಎಂಬುದನ್ನೆಲ್ಲ ನೀವೇ ಗಮನಿಸುತ್ತಿದ್ದೀರಾ, ಅಂತಹ ವಾತಾವರಣ ನಿರ್ಮಾಣವಾದಾಗ ನನಗೂ ಅವಕಾಶ ಸಿಗುತ್ತದೆ ಎಂದು ಕಾಯುತ್ತಿದ್ದೇನೆ ಎಂದಿದ್ದಾರೆ.


Share It

You cannot copy content of this page