ಬೆಳಗಾವಿ: ಮುಂದಿನ ಬಾರಿ ಗೋಕಾಕ ವಿಧಾನಸಭಾ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಹೇಳಿದ್ದಾರೆ.
ಬುಧವಾರ ಗೋಕಾಕನಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಸದ್ಯದ ರಾಜಕೀಯ ಪರಿಸ್ಥಿತಿಯಿಂದ ಬೇಸತ್ತಿದ್ದೇನೆ. ಈ ಹಿನ್ನೆಲೆಯಲ್ಲಿ ನಾನು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಸಾಮಾಜಿಕ ಹೋರಾಟ ಮುಂದುವರಿಸುವೆ. ಈ ನಿಟ್ಟಿನಲ್ಲಿ ಗೋಕಾಕ ಜಿಲ್ಲಾ ರಚನೆ ಹೋರಾಟವನ್ನು ಇನ್ನಷ್ಟು ಚುರುಕುಗೊಳಿಸಲಾಗುವುದು. ಸತೀಶ ಜಾರಕಿಹೊಳಿ ಅವರು ಸಚಿವರಾಗಿದ್ದು ಅವರು ಇನ್ನಷ್ಟು ಮುತುವರ್ಜಿ ವಹಿಸಿ ಗೋಕಾಕ ಜಿಲ್ಲೆ ರಚನೆಗೆ ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.
ಗೋಕಾಕನ್ನು ತಕ್ಷಣ ಹೊಸ ಜಿಲ್ಲೆಯನಾಗಿ ಘೋಷಣೆ ಮಾಡಬೇಕು. ಆಡಳಿತಾತ್ಮಕವಾಗಿ ಎಷ್ಟು ಜಿಲ್ಲೆ ಮಾಡಬೇಕು ಎನ್ನುವುದನ್ನು ಸರಕಾರ ಪರಿಶೀಲಿಸಬೇಕು ಎಂದು ಮನವಿ ಮಾಡಿದರು.