ಉಪಯುಕ್ತ ಸುದ್ದಿ

ಐಡಿಬಿಐ ಬ್ಯಾಂಕ್, ಮೈಕೋ ಶಾಖೆಯಿಂದ ಸಿ ಎಸ್ ಆರ್ ಚಟುವಟಿಕೆಗಳ ಆಡಿಯಲ್ಲಿ ಶಾಲೆಗೆ ದೇಣಿಗೆ

Share It

ಐಡಿಬಿಐ ಬ್ಯಾಂಕ್ ಮೈಕೋ ಶಾಖೆ ತನ್ನ ಕೋರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ (CSR) ಚಟುವಟಿಕೆಗಳ ಆಡಿಯಲ್ಲಿ ಬೆಂಗಳೂರಿನ ಯಳ್ಳುಂಕುಂಟೆ ಹಿರಿಯ ಪ್ರಾಥಮಿಕ ಶಾಲೆಗೆ ನೀರು ಶುದ್ಧೀಕರಣ ಯಂತ್ರ (ವಾಟರ್ ಪ್ಯೂರಿಫೈಯರ್) ಹಾಗೂ ಅಡುಗೆ ಪಾತ್ರೆಗಳನ್ನು ದೇಣಿಗೆಯಾಗಿ ನೀಡಿತು.

ಈ ಸಂದರ್ಭದಲ್ಲಿ ಐಡಿಬಿಐ ಬ್ಯಾಂಕಿನ ಅಧಿಕಾರಿ ಎಂ ಮಹೇಶ್ವರನ್ ಮತ್ತು ಪ್ರಾಗ್ಯ ತ್ರಿಪಾಠಿಯವರು ಈ ವಸ್ತುಗಳನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಎಂ ಶ್ರೀನಾಥ್ ರವರಿಗೆ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಹೆಚ್ ಎಸ್ ಆರ್ ಸಿಟಿಜ಼ನ್ ಫೋರಂ ಅಧ್ಯಕ್ಷ ಬಿ.ಎನ್.ಎಸ್. ರತ್ನಾಕರ್ ಮತ್ತು ಬ್ಯಾಂಕರ್ಸ್ ಕನ್ನಡಿಗರ ಬಳಗದ ಅಧ್ಯಕ್ಷ ಎಂ ವೆಂಕಟೇಶ ಶೇಷಾದ್ರಿ ಉಪಸ್ಥಿತರಿದ್ದರು.


Share It

You cannot copy content of this page