ಬೆಂಗಳೂರು: ಪ್ರಜ್ವಲ್ ಪೆನ್‌ಡ್ರೆöÊವ್ ಪ್ರಕರಣ ಗಂಭಿರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಎಸ್‌ಐಟಿ, ವೈರಲ್ ಆಗಿರುವ ವಿಡಿಯೋಗಳನ್ನು ಮತ್ಯಾರಿಗಾದರೂ ಶೇರ್ ಮಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದೆ.
ಸಂಸದ ಪ್ರಜ್ವಲ್ ಅವರು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎನ್ನಲಾದ ಸಾವಿರಾರು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದೀಗ ಆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಎಸ್‌ಐಟಿ, ಈಗಾಗಲೇ ಮಾಜಿ ಸಚಿವರೂ ಆದ ರೇವಣ್ಣ ಅವರನ್ನು ಆರೆಸ್ಟ್ ಮಾಡಿದೆ.
ಈ ನಡುವೆಯೂ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳು ಹರಿದಾಡುವ ಮೂಲಕ ಸಂತ್ರಸ್ತೆಯರ ಸಂಕಟವನ್ನು ಹೆಚ್ಚಿಸಿವೆ. ಹೀಗಾಗಿ, ಆ ವಿಡಿಯೋಗಳನ್ನು ಶೇರ್ ಮಾಡದಂತೆ ಎಸ್‌ಐಟಿ ಎಚ್ಚರಿಕೆ ನೀಡಿದೆ. ಈ ಸಂಬAಧ ಕಾನೂನು ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನು ನೀಡಿದೆ.
ವಾಟ್ಸಾಪ್ ಸೇರಿದಂತೆ ಇನ್ನಿತರ ಮಾಧ್ಯಮಗಳ ಮೂಲಕ ಅಶ್ಲೀಲ ವಿಡಿಯೋಗಳನ್ನು ಹಂಚಿಕೊಳ್ಳುವುದು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂ ೬೯ (ಎ) ಹಾಗೂ ೨೨೮ (ಎ) ೧, ೨೯೨ ಐಪಿಸಿ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದ್ದು, ಈ ಕಲಂನಡಿ ಕಾನೂನು ಕ್ರಮ ತೆಗೆದುಕೊಳ್ಳಲು ಎಸ್‌ಐಟಿ ತೀರ್ಮಾನಿಸಿದೆ.
ದೌರ್ಜನ್ಯಕ್ಕೊಳಗಾದ ಮಹಿಳೆಯರಿಗಾಗಿ ಈಗಾಗಲೇ ಎಸ್‌ಐಟಿ, ಸಹಾಯವಾಣಿಯನ್ನು ಆರಂಭಿಸಿದೆ. ಈ ಸಹಾಯವಾಣಿಯಲ್ಲಿ ಮೊದಲದಾಗಿ ಕೇಳಿಬಂದ ಬೇಡಿಕೆಯೇ, ವಿಡಿಯೋ ಒಬ್ಬರಿಗೊಬ್ಬರಿಗೆ ಹರಿದಾಡುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಿ, ಇಲ್ಲದಿದ್ದರೆ ನಮ್ಮ ಜೀವನ ಹಾಳಾಗುತ್ತದೆ ಎಂಬುದಾಗಿತ್ತು.
ಈ ಹಿನ್ನೆಲೆಯಲ್ಲಿ ಎಸ್‌ಐಟಿ ಆದೇಶ ಮಾಡಿದ್ದು, ವಿಡಿಯೋಗಳನ್ನು ಪರಸ್ಪರ ಶೇರ್ ಮಾಡಿಕೊಳ್ಳುವುದಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದಾಗಲೀ, ಮಾಡಬಾರದು, ಹೀಗೆ ಮಾಡಿದ್ದೇ ಆದರೆ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.