ಸುದ್ದಿ

ರೈತರಿಗೆ ಮಾರಾಟವಾಗಬೇಕಿದ್ದ 1256 ಚೀಲ ಯೂರಿಯಾದ ಅಕ್ರಮ ದಾಸ್ತಾನು ಪತ್ತೆ

Share It

ಮೈಸೂರು: ರೈತರಿಗೆ ಮಾರಾಟವಾಗಬೇಕಿದ್ದ 1256 ಚೀಲ ಯೂರಿಯಾವನ್ನು ಅಕ್ರಮವಾಗಿ ಖಾಸಗಿ ಗೋಡೌನ್‌ನಲ್ಲಿ ಸಂಗ್ರಹಿಸಿಟ್ಟಿದ್ದನ್ನು ಕೃಷಿ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.

ಕೃಷಿ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ
ಹುಣಸೂರು ತಾಲೂಕಿನ ಕಳ್ಬೆಟ್ಟ ಗ್ರಾಮದ ಗೋಡೌನ್‌ನಲ್ಲಿ 1256 ಚೀಲ ಯೂರಿಯಾ ಪತ್ತೆಯಾಗಿದೆ. ಅಧಿಕಾರಿಗಳ ದಾಳಿಯ ಸಂದರ್ಭದಲ್ಲಿ ಅಲ್ಲಿದ್ದ ಸಿಬ್ಬಂದಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಗೋಡೌನ್ ಏಜದ್ ಪಾಷಾ ಎಂಬುವವರಿಗೆ ಸೇರಿದ್ದು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ. ಆತನ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಹುಣಸೂರು ಗ್ರಾಮಾಂತರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.


Share It

You cannot copy content of this page