ಚಿಕ್ಕೋಡಿ: ಮೂರು ಮಕ್ಕಳ ತಾಯಿ ಜತೆಗೆ ಅಕ್ರಮ ಸಂಬಂಧ ಹೊಂದಿದ್ದ ಯುವಕನನ್ನು ಮನಸೋಯಿಚ್ಛೆ ಥಳಿಸಿದ್ದು, ಗಂಭೀರವಾಗಿ ಗಾಯಗೊಂಡಿರುವ ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಅಕ್ಷಯ್ ಕಲ್ಲಟಗಿ ಎಂಬಾAತನಿಗೆ ಮೂರು ಮಕ್ಕಳಿದ್ದ ಮಹಿಳೆಯ ಜತೆಗೆ ಸಂಬಂಧ+ವಿತ್ತು. ಕಳೆದ ನಾಲ್ಕು ವರ್ಷದಿಂದ ಆತ ಆಂಟಿಯ ಜತೆಗೆ ಸಲುಗೆಯಿಂದಿದ್ದ ಎನ್ನಲಾಗಿದೆ. ರಾತ್ರಿ ಆಕೆ ಮನೆಗೆ ಕರೆದಳು ಎಂಬ ಕಾರಣಕ್ಕೆ ಆತ ಮನೆಗೆ ಹೋಗುತ್ತಿದ್ದ. ಈ ಸಂದರ್ಭದಲ್ಲಿ ಅಡ್ಡಗಟ್ಟಿದ ಮಹಿಳೆಯ ಪತಿ ಹಾಗೂ ಸಹೋದರ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.
ಅಕ್ಷಯ್ಗೆ ಚಿಕ್ಕೋಡಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಚಿಕ್ಕೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

