ಬೆಂಗಳೂರು: ಜಾತಿಗಣತಿಯ ಮರು ಸಮೀಕ್ಷೆ ನಡೆಸಲು ಮುಂದಾಗಿರುವ ರಾಜ್ಯ ಸರಕಾರ 15 ದಿನಗಳಲ್ಲಿ ಸಮೀಕ್ಷೆ ಪೂರ್ಣಗೊಳಿಸುವಂತೆ ತಾಕೀತು ಮಾಡಿದೆ.
ಸೆ.22ರಿಂದ ಜಾತಿಗಣತಿಯ ಸಮೀಕ್ಷೆ ಆರಂಭಿಸಿ, ಅಕ್ಟೋಬರ್ ಕೊನೆಯ ವಾರದಲ್ಲಿ ವರದಿ ಸಲ್ಲಿಕೆ ಮಾಡುವಂತೆ ಸೂಚನೆ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಹಿಂದುಳಿದ ವರ್ಗಗಳ ಆಯೋಗದ ಮೂಲಕ ರಚನೆಯಾಗಿರುವ ಜಾತಿ ಸಮೀಕ್ಷೆಗಾಗಿ ನೇಮಿಸಿರುವ ಸಮಿತಿಗೆ ತಿಳಿಸಲಾಗಿದೆ.
ಜಾತಿಗಣತಿಯಲ್ಲಿ ಕಳೆದ ಸಲ ಕೆಲ ಲೋಪಗಳಾಗಿವೆ ಎಂಬ ಕಾರಣಕ್ಕೆ ಹಿಂಪಡೆಯಲಾಗಿದೆ. ಕೆಲವು ಸಮುದಾಯಗಳಿಂದ ಇದಕ್ಕೆ ವ್ಯಾಪಕ ವಿರೋಧವೂ ವ್ಯಕ್ತವಾಗಿತ್ತು. ಹೀಗಾಗಿ, ಯಾವುದೇ ಕಾರಣಕ್ಕೂ ಈ ಸಲ ಲೋಪಗಳಾಗದಂತೆ ಕ್ರಮ ವಹಿಸಬೇಕು ಎಂದು ಸಿಎಂ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.