ಸಾರ್ವಜನಿಕರಿಗೆ ಮಹತ್ವದ ಮಾಹಿತಿ: ರಾಜ್ಯದಲ್ಲಿ ಮತ್ತೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ

Share It

ರಾಜ್ಯ ಸರ್ಕಾರವು ರೇಷನ್ ಕಾರ್ಡ್ ತಿದ್ದುಪಡಿ ಹಾಗೂ ಹೊಸ ರೇಷನ್ ಕಾರ್ಡ್ ಅರ್ಜಿಗೆ ಮತ್ತೆ ಅವಕಾಶ ಕಲ್ಪಿಸಿದೆ. ವಿವಿಧ ಸರ್ಕಾರಿ ಯೋಜನೆಗಳ ಸೌಲಭ್ಯ ಪಡೆಯಲು ರೇಷನ್ ಕಾರ್ಡ್ ಅತ್ಯಂತ ಅಗತ್ಯ ದಾಖಲೆ ಆಗಿರುವುದರಿಂದ, ಇದರಲ್ಲಿ ಯಾವುದೇ ತಪ್ಪುಗಳಿದ್ದರೆ ಕೂಡಲೇ ಸರಿಪಡಿಸಿಕೊಳ್ಳುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮನವಿ ಮಾಡಿದೆ.

ಬಿಪಿಎಲ್ (BPL) ಆಗಲಿ ಅಥವಾ ಎಪಿಎಲ್ (APL) ಆಗಲಿ, ಸರ್ಕಾರ ನೀಡುವ ರೇಷನ್ ಕಾರ್ಡ್ ಆಧಾರ್ ಕಾರ್ಡ್‌ನಷ್ಟು ಮಹತ್ವ ಪಡೆದ ದಾಖಲೆ. ಇದು ಕೇವಲ ಅಕ್ಕಿ, ಗೋಧಿ ಮುಂತಾದ ಆಹಾರ ಸಾಮಗ್ರಿಗಳನ್ನು ರಿಯಾಯಿತಿ ದರದಲ್ಲಿ ಪಡೆಯಲು ಮಾತ್ರವಲ್ಲ, ಗ್ಯಾಸ್ ಸಹಾಯಧನ, ವಿದ್ಯುತ್ ಬಿಲ್ ರಿಯಾಯಿತಿ ಸೇರಿದಂತೆ ಅನೇಕ ಕಲ್ಯಾಣ ಯೋಜನೆಗಳಿಗೆ ಗುರುತಿನ ದಾಖಲೆ ಆಗಿಯೂ ಬಳಸಲಾಗುತ್ತದೆ.

2025ರಿಂದ ರೇಷನ್ ಕಾರ್ಡ್ ಪಡೆಯುವ ಹಾಗೂ ತಿದ್ದುಪಡಿ ಮಾಡುವ ಸಂಪೂರ್ಣ ಪ್ರಕ್ರಿಯೆಯನ್ನು ಡಿಜಿಟಲ್ ಮಾಡಲಾಗಿದೆ. ಇದರ ಮೂಲಕ ಹೆಸರು ಅಥವಾ ಇನ್ಷಿಯಲ್ ಬದಲಾವಣೆ, ಕುಟುಂಬ ಸದಸ್ಯರ ಸೇರ್ಪಡೆ ಸೇರಿದಂತೆ ಹಲವು ಬದಲಾವಣೆಗಳನ್ನು ಸುಲಭವಾಗಿ ಮಾಡಿಕೊಳ್ಳಬಹುದು.

ಹೆಸರು ಮತ್ತು ಸ್ಪೆಲ್ಲಿಂಗ್ ದೋಷ ಸರಿಪಡಿಸುವುದು, ಮನೆ ಅಥವಾ ಊರು ಬದಲಾಗಿದ್ದರೆ ವಿಳಾಸ ತಿದ್ದುಪಡಿ, ಕುಟುಂಬದಲ್ಲಿ ಮಗು ಜನಿಸಿದರೆ ಹೊಸ ಸದಸ್ಯರನ್ನು ಸೇರಿಸುವುದು, ಯಾರಾದರೂ ಮೃತಪಟ್ಟಿದ್ದರೆ ಅವರ ಹೆಸರನ್ನು ಕೈಬಿಡುವುದು, ವಯಸ್ಸು, ಫೋಟೋ ಮತ್ತು ಮೊಬೈಲ್ ಸಂಖ್ಯೆಯನ್ನು ಅಪ್‌ಡೇಟ್ ಮಾಡುವ ಅವಕಾಶವೂ ಇದೆ.

ರೇಷನ್ ಕಾರ್ಡ್ ತಿದ್ದುಪಡಿ ಎರಡು ಮಾರ್ಗಗಳಲ್ಲಿ ಮಾಡಿಕೊಳ್ಳಬಹುದು. ಒಂದು ಆನ್‌ಲೈನ್ ಮೂಲಕ ಹಾಗೂ ಇನ್ನೊಂದು ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಅಥವಾ ಜನಸ್ನೇಹಿ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸುವ ಮೂಲಕ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದರೆ ಯಾವುದೇ ಶುಲ್ಕ ಇರುವುದಿಲ್ಲ.

ಸೇವಾ ಕೇಂದ್ರಗಳಲ್ಲಿ ಅರ್ಜಿ ನೀಡಿದರೆ ಸುಮಾರು 20 ರಿಂದ 50 ರೂಪಾಯಿಗಳವರೆಗೆ ಶುಲ್ಕ ವಿಧಿಸಲಾಗುತ್ತದೆ. ಆನ್‌ಲೈನ್ ಅರ್ಜಿಗೆ 7 ರಿಂದ 15 ದಿನಗಳು, ಆಫ್‌ಲೈನ್ ಅರ್ಜಿಗೆ 10 ರಿಂದ 20 ದಿನಗಳೊಳಗೆ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ರೇಷನ್ ಕಾರ್ಡ್ ತಿದ್ದುಪಡಿಗೆ 2026ರ ಮಾರ್ಚ್ ವರೆಗೆ ಅವಕಾಶ ನೀಡಲಾಗಿದೆ.


Share It

You May Have Missed

You cannot copy content of this page