ಬೆಂಗಳೂರು: ಪ್ರಮುಖ ಅಂತಾರಾಷ್ಟ್ರೀಯ ಕೆ12 ಸರಪಳಿಯ ಶಾಲೆಗಳಲ್ಲಿ ಒಂದಾಗಿರುವ ಆರ್ಕಿಡ್ಸ್ ದಿ ಇಂಟರ್‌ನ್ಯಾಶನಲ್ ಸ್ಕೂಲ್ ಮೂರು ದಿನಗಳ ಕಾಲ ನಡೆಯುವ ನಕ್ಷತ್ರ ಮೇಳ ಗೋ ಕಾಸ್ಮೊ-ಯುವರ್ ಟಿಕೆಟ್ ಟು ಸ್ಪೇಸ್ ಅನ್ನು ಆಯೋಜಿಸಿದೆ.
ಎಲ್ಲಾ ವಯಸ್ಸಿನ ಜನರಲ್ಲಿ ಖಗೋಳಶಾಸ್ತ್ರ, ವಿಶ್ವವಿಜ್ಞಾನ ಮತ್ತು ಭೌತಶಾಸ್ತ್ರದ ಮೇಲೆ ಪ್ರೀತಿ ಮತ್ತು ಆಸಕ್ತಿ ಹುಟ್ಟಿಸುವಂತೆ ರೂಪಿಸಲಾಗಿರುವ ವಿಶೇಷ ಕಾರ್ಯಕ್ರಮ ಮೇ. 10 ರಂದು ಬೆಂಗಳೂರಿನಲ್ಲಿ ಆರಂಭಗೊಂಡಿತು. ಈ ಕಾರ್ಯಕ್ರಮದಲ್ಲಿ ಸಂವಾದಾತ್ಮಕ ಚಟುವಟಿಕೆಗಳು, ಶೈಕ್ಷಣಿಕ ಮಾಹಿತಿ ನೀಡುವ ಗೋಷ್ಠಿಗಳು ಮತ್ತು ಮನರಂಜನಾ ಕಲಿಕಾ ಸೆಷನ್ ಗಳು ನಡೆಯಲಿವೆ. ಬಾಹ್ಯಾಕಾಶ ನೌಕೆ ನಿರ್ಮಿಸುವುದರಿಂದ ಹಿಡಿದು ನಕ್ಷತ್ರಗಳನ್ನು ನೋಡುವವರೆಗೆ ಹಲವಾರು ರೀತಿಯ ಖಗೋಳ ಶಾಸ್ತ್ರೀಯ ಅನುಭವವನ್ನು ಕಾರ್ಯಕ್ರಮ ಒದಗಿಸಲಿದೆ.
ಆರ್ಕಿಡ್ಸ್ ದಿ ಇಂಟರ್‌ನ್ಯಾಶನಲ್ ಸ್ಕೂಲ್ ನ ಅಕಾಡೆಮಿಕ್ಸ್- ಸ್ಟುಡೆಂಟ್ ವೆಲ್‌ಫೇರ್ ವಿಪಿ ಹರ್ಷ ಗುಪ್ತಾ ಮಾತನಾಡಿ, “ಗೋ ಕಾಸ್ಮೊ ಕಾರ್ಯಕ್ರಮವು ಸಾಂಪ್ರದಾಯಿಕ ಕಲಿಕೆ ಮೀರಿ ಬಾಹ್ಯಾಕಾಶ ವಿಜ್ಞಾನದ ಕುರಿತಾದ ಪ್ರಾಯೋಗಿಕ ಅನುಭವ ನೀಡಿ ಆ ಕುರಿತು ಹೆಚ್ಚು ಶ್ರದ್ಧೆ ಮತ್ತು ಕುತೂಹಲ ಹುಟ್ಟುವಂತೆ ಮಾಡುತ್ತದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮಕ್ಕಳನ್ನು ಆನಂದದಾಯಕ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಮುಂದಿನ ಪೀಳಿಗೆ ವೈಜ್ಞಾನಿಕ ಸಂಶೋಧಕರಾಗುವ ಸ್ಫೂರ್ತಿ ತುಂಬಬಹುದು ಎಂದರು.
ಆರ್ಕಿಡ್ಸ್ ದಿ ಇಂಟರ್‌ನ್ಯಾಶನಲ್ ಸ್ಕೂಲ್ ನ ಆಸ್ಟ್ರಾನಮಿ- ಅಕಾಡೆಮಿಕ್ಸ್ ವಿಪಿ ಅಜಿತ್ ಸಿಂಗ್ ಮಾತನಾಡಿ, “ಭಾರತದ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ (ಎನ್‌ಇಪಿ) ಬಾಹ್ಯಾಕಾಶ ಶಿಕ್ಷಣ ಸೇರ್ಪಡೆಗೊಳಿಸುವುದರಿಂದ ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ ಮನಸ್ಥಿತಿ ಬೆಳೆಯಲಿದೆ. ಬಾಹ್ಯಾಕಾಶ ಪರಿಶೋಧನೆ ಮೀರಿ ಆರ್ಥಿಕ ಬೆಳವಣಿಗೆಗೆ ಕಾರಣವಾಗುವ ಸಂಶೋಧನೆಗಳಲ್ಲಿ ತೊಡಗುವಂತೆ ಮಾಡುತ್ತದೆ. ಮುಂದಿನ ದಶಕದಲ್ಲಿ ಭಾರತೀಯ ಬಾಹ್ಯಾಕಾಶ ಕ್ಷೇತ್ರದ ಆರ್ಥಿಕತೆ 33 ಬಿಲಿಯನ್ ಯುಎಸ್ ಡಿ ತಲುಪುವ ನಿರೀಕ್ಷೆಯಿದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ಸಂಬಂಧಿತ ಕ್ಷೇತ್ರಗಳ ಕುರಿತಾದ ವಿಶೇಷ ಕೌಶಲ್ಯ ಒದಗಿಸಿ ಸಿದ್ಧಗೊಳಿಸುವುದು ಮುಖ್ಯವಾಗಿದೆ.” ಎಂದು ಹೇಳಿದರು.
ಗೋ ಕಾಸ್ಮೊ ನಕ್ಷತ್ರ ಮೇಳದಲ್ಲಿ ಭಾಗವಹಿಸುವವರು ವಿಮರ್ಶಾತ್ಮಕ ಚಿಂತನೆ, ಸಮಸ್ಯೆ ಪರಿಹರಿಸುವ ಕಲೆ ಮತ್ತು ಬಾಹ್ಯಾಕಾಶ- ಸಂಬಂಧಿತ ಪರಿಕಲ್ಪನೆಗಳ ಗಾಢ ತಿಳುವಳಿಕೆ ಹೊಂದುವಂತೆ ವಿನ್ಯಾಸಗೊಳಿಸಲಾದ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶ ಹೊಂದಿರುತ್ತಾರೆ. ಕಾರ್ಯಕ್ರಮ ಏಲಿಯನ್ ಎನ್ಕೌಂಟರ್, ಪ್ಲಾನೆಟರಿ ಪಾಂಡರ್, ಗ್ರಾವಿಟೇಶನಲ್ ಜಿಮ್, ಕಾಮೆಟ್ ಕ್ರಾಫ್ಟಿಂಗ್, ಕಾಸ್ಮಿಕ್ ಕೊಲೈಡರ್, ವರ್ಚುವಲ್ ವಾಯೇಜರ್, ಸ್ಟೆಲ್ಲರ್ ಸ್ಪೆಕ್ಟಾಕಲ್, ಸ್ಟಾರ್ ಸೀಕರ್ ಮತ್ತು ಸ್ಪಿನ್ನಿಂಗ್ ಸ್ಪೇಸ್‌ಶಿಪ್ ವರ್ಕ್‌ಶಾಪ್ ಸೇರಿ ಹಲವಾರು ಚಟುವಟಿಕೆಗಳನ್ನು ಹೊಂದಿದೆ. ಎಲ್ಲಾ ವಯಸ್ಸಿನ ಮತ್ತು ವಿಭಿನ್ನ ಆಸಕ್ತಿಯ ಮಂದಿ ಈ ಚಟುವಟಿಕೆಗಳಲ್ಲಿ ಭಾಗವಹಿಸಬಹುದಾಗಿದೆ.