ಬೆಂಗಳೂರು: ನಗರದಲ್ಲಿ ಡೆಂಘಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ಭಾನುವಾರವೂ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆಗೆ ಭೇಟಿ ನೀಡಿದ ಹರ್ಷಗುಪ್ತ, ಅಲ್ಲಿನ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದರು. ನಗರದಲ್ಲಿ ದಿನೇದಿನೆ ಡೆಂಘಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಿಯಂತ್ರಣಕ್ಕೆ ಆಸ್ಪತ್ರೆಗಳಲ್ಲಿ ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆದರೆ, ಅಲ್ಲಿ ಸರಿಯಾಗಿ ನಿರ್ವಹಣೆ ಮಾಡಲಾಗುತ್ತಿಲ್ಲ ಎಂಬ ಮಾಹಿತಿ ಮೇರೆಗೆ ಹರ್ಷಗುಪ್ತ ಭೇಟಿ ನೀಡಿದ್ದಾರೆ.
ರಜಾದಿನವಾದ ಭಾನುವಾರವೂ ಫೀಲ್ಡಿಗಿಳಿದ ಹರ್ಷಗುಪ್ತ, ಕೆ.ಸಿ. ಜನರಲ್ ಆಸ್ಪತ್ರೆಗಳ ನೋಂದಣಿಗೆ ಇರುವ ಕ್ಯೂರ್ ಆರ್ ಕೋಡ್ ಸಮಸ್ಯೆಯನ್ನು ಬೆಗೆಹರಿಸುವಂತೆ ಸೂಚನೆ ನೀಡಿದರು. ಈ ಹಿಂದೆ ಕ್ಯೂಆರ್ ಕೋಡ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ದೂರು ಬಂದಿತ್ತು.