ಬೆಂಗಳೂರು : ಬೆಂಗಳೂರಿನ ಚಿನ್ನಸ್ವಾಮಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬುಧವಾರ ಶುರುವಾದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಮಳೆ ಕಾರಣದಿಂದ ಪಂದ್ಯದ ಮೊದಲ ದಿನ ಸಂಪೂರ್ಣವಾಗಿ ರದ್ದಾಯಿತು. ಪಂದ್ಯದ ಎರಡನೇ ದಿನ ಟೀಮ್ ಇಂಡಿಯಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.
ಬ್ಯಾಟಿಂಗ್ ಆಡಲು ಕಣಕ್ಕಿಳಿದ ಭಾರತೀಯ ಬ್ಯಾಟ್ಸ್ಮನ್ ಗಳಿಗೆ ಕಿವೀಸ್ ಬೌಲರ್ ಗಳಾದ ಮ್ಯಾಟ್ ಹೆನ್ರಿ ಮತ್ತು ವಿಲಿಯಂ ರುಕ್ರೆ ದಾಳಿಗೆ ಮುಗ್ಗರಿಸಿದ ಟೀಮ್ ಇಂಡಿಯಾದ ಐದು ಬ್ಯಾಟರ್ ಗಳು ಖಾತೆ ತೆರೆಯದೆ ಪೆವಿಲಿಯನ್ ಸೇರಿದರು.
ಭಾರತದ ಪರ ಬ್ಯಾಟ್ ಬೀಸಿದ ಯಶಸ್ವಿ ಜೈಸ್ವಾಲ್ 13, ನಾಯಕ ರೋಹಿತ್ ಶರ್ಮ 2, ರಿಷಬ್ ಪಂತ್ 20, ಕುಲ್ದೀಪ್ ಯಾದವ್ 2, ಮಹಮದ್ ಸಿರಾಜ್ 4 ರನ್ ಬಿಟ್ಟರೆ ವಿರಾಟ್ ಕೊಹ್ಲಿ, ಸಾರ್ಫಾರಾಜ್ ಖಾನ್, ರಾಹುಲ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್ ಸೊನ್ನೆ ಸುತ್ತಿದರು.
31.2 ಓವರ್ ಗಳಲ್ಲಿ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು ಟೀಮ್ ಇಂಡಿಯಾ ಕೇವಲ 46 ರನ್ ಗಳಿಸಿ ಕೆಟ್ಟ ದಾಖಲೆ ನಿರ್ಮಿಸಿತು. ಕಿವಿಸ್ ಪರ ಬೌಲಿಂಗ್ ಮಾಡಿದ ಮ್ಯಾಟ್ ಹೆನ್ರಿ 5 ವಿಕೆಟ್, ವಿಲಿಯಂ ರುಕ್ರೆ 4, ಟೀಮ್ ಸೌತಿ 1 ವಿಕೆಟ್ ಪಡೆದು ಭಾರತದ ಬ್ಯಾಟ್ಸ್ಮನ್ ಗಳ ಬೆವರಿಳಿಸಿದರು.
ಇನ್ನು ಎರಡನೇ ಇನ್ನಿಂಗ್ಸ್ ನಲ್ಲಿ ಬ್ಯಾಟ್ ಬೀಸಲು ಬಂದ ಕಿವಿಸ್ ಬ್ಯಾಟರ್ ಗಳು ಉತ್ತಮ ಆರಂಭ ನೀಡಿದರು. ನಾಯಕ ಟಾಮ್ ಲೆತಮ್ 15 ರನ್ ಗಳಿಸಿ ಪೆವಿಲಿಯನ್ ಸೇರಿದರು. ನಂತರ ಕ್ರೀಸ್ ಕಚ್ಚಿ ನಿಂತ ಕಿವಿಸ್ ನ ಎಡಗೈ ಬ್ಯಾಟರ್ ಡೆವಾನ್ ಕಾನ್ವೆ ಬರೋಬ್ಬರಿ 91 ರನ್ ಗಳಿಸಿ ಅಶ್ವಿನಿ ಗೆ ವಿಕೆಟ್ ಒಪ್ಪಿಸಿದರು.
ಬಳಿಕ ಬಂದ ವಿಲ್ ಯಂಗ್ 33 ರನ್ ಗಳಿಸಿದರೆ ರಚಿನ್ ರವಿಚಂದ್ರ ಮತ್ತು ಡೇರೆಲ್ ಮಿಚ್ಚಲ್ ಪಂದ್ಯದ ಎರಡನೇ ದಿನದ ಅಂತ್ಯಕ್ಕೆ 50 ಓವರ್ ಗಳನ್ನು ಪೂರ್ಣಗೊಳಿಸಿ 180ರ ಗಡಿಯನ್ನು ತಲುಪಿದರು. ಎರಡನೇ ವಿನ್ನಿಂಗ್ಸ್ ನಲ್ಲಿ ಭಾರತದ ಪರ ಬೌಲ್ ಮಾಡಿದ ಅಶ್ವಿನ್, ಜಡೇಜಾ, ಕುಲ್ದೀಪ್ ತಲಾ ಒಂದೊಂದು ವಿಕೆಟ್ ಪಡೆದರು.
ಶಿವರಾಜು ವೈ. ಪಿ
ಎಲೆರಾಂಪುರ