ಶಿವರಾಜು. ವೈ. ಪಿ
ಎಲೆರಾಂಪುರ.
ಕೊಲಂಬೋ (ಶ್ರೀಲಂಕಾ) : ಶುಕ್ರವಾರ ಆರ್ ಪ್ರೇಮದಾಸ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಮೂರು ಏಕದಿನ ಪಂದ್ಯಗಳ ಸರಣಿಯ ಮೊದಲನೇ ಪಂದ್ಯದಲ್ಲಿ ಭಾರತ ಶ್ರೀಲಂಕಾ ನೀಡಿದ್ದ 230 ರನ್ ಗಳನ್ನು ಬೆನ್ನಲು ಮುಗ್ಗರಿಸಿದ ಭಾರತ ಆಲ್ ಔಟ್ ಆಗಿ ಪಂದ್ಯವನ್ನು ಟೈ ಮಾಡಿಕೊಂಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ ತಂಡಕ್ಕೆ ಪವರ್ ಪ್ಲೆನಲ್ಲೆ ಸಿರಾಜ್ ಅವಿಷ್ಕಾ ಫರ್ನಾಂಡೋ ವಿಕೆಟ್ ಕೀಳುವುದರ ಮೂಲಕ ಅಘಾತ ನೀಡಿದರು. ನಂತರ ಕ್ರೀಸ್ ಕಚ್ಚಿ ನಿಂತ ಪತುಮ್ ನಿಸ್ಸಾಂಕ 75 ಬಾಲ್ ಗಳಲ್ಲಿ 9 ಬೌಂಡರಿ ಸಹಿತ ಅರ್ಧ ಶತಕ ಸಿಡಿಸಿ ಪೆವಿಲಿಯನ್ ಸೇರಿದರು. ಬಳಿಕ ಮಧ್ಯಮ ಕ್ರಮಂಕದಲ್ಲಿ ಬಂದ ಲಂಕಾ ಬ್ಯಾಟರ್ ಗಳು ಹೆಚ್ಚು ಪ್ರದರ್ಶನ ನೀಡಲಿಲ್ಲ.
ಕೆಳ ಕ್ರಮಾಂಕದಲ್ಲಿ ಮೈದಾನಕ್ಕಿಳಿದ ಯುವ ಆಲ್ ರೌಂಡರ್ ಗಳಾದ ದುನಿತ್ ವೆಲ್ಲಲಿಗೆ ಮತ್ತು ಹಸರಂಗ ಶ್ರೀಲಂಕಾ ಕಂಬ್ಯಾಕ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಭಾರತದ ಪರ ಬೌಲ್ ಮಾಡಿದ ಆರ್ಶಿದೀಪ್ ಸಿಂಗ್ ಮತ್ತು ಅಕ್ಷರ್ ಪಟೇಲ್ ತಲಾ 2 ವಿಕೆಟ್ ಪಡೆದು ಲಂಕಾವನ್ನು 230 ರನ್ ಗಳಿಗೆ ಕಟ್ಟಿಹಾಕಲು ಯಶಸ್ವಿಯಾಯಿತು.
ಎರಡನೇ ಇನ್ನಿಂಗ್ಸ್ ನಲ್ಲಿ ಟೀಮ್ ಇಂಡಿಯಾದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಶುಭ್ಮನ್ ಗಿಲ್ ಹಾಗೂ ನಾಯಕ ರೋಹಿತ್ ಶರ್ಮ ಉತ್ತಮ ಜೊತೆಯಾಟ ಆಡಿದರು.ರೋಹಿತ್ ಶರ್ಮ 47 ಬಾಲ್ ಗಳಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್ ಸೇರಿ ಅರ್ಧ ಶತಕ ಸಿಡಿಸಿ ಮಿಂಚಿದರು. ನಂತರ ಶುಭ್ಮನ್ ಗಿಲ್ 16 ಗಳಿಸಿ ವಿಕೆಟ್ ಒಪ್ಪಿಸಿದರು.
ನಂತರ ಬಂದ ವಿರಾಟ್ ಕೊಹ್ಲಿ 24 ರನ್ ಗಳಿಸಿ ಪೆವಿಲಿಯನ್ ಸೇರಿದರು. ಬಳಿಕ ಬಂದ ಕೆ ಎಲ್ ರಾಹುಲ್, ಅಕ್ಷರ್ ಪಟೇಲ್ ರವರ ನಿರಂತರ ಹೋರಾಟದಿಂದ ಪಂದ್ಯ ಗೆಲ್ಲುವ ನಿರೀಕ್ಷೆ ಯಲ್ಲಿದ್ದ ಟೀಮ್ ಇಂಡಿಯಾಗೆ ನಾಯಕ ಅಸಲಂಕ ಅಘಾತ ನೀಡಿದರು.
ಕೊನೆಯಲ್ಲಿ ಬೌಲಿಂಗ್ ಮಾಡಲು ಬಂದ ಅಸಲಂಕ ಶಿವಂ ದುಬೆ ಮತ್ತು ಆರ್ಶದೀಪ್ ಸಿಂಗ್ ರವರನ್ನು ಎಲ್ ಬಿ ಡಬ್ಲ್ಯೂ ಮಾಡಿ ಟೀಮ್ ಇಂಡಿಯಾವನ್ನು 230 ರನ್ ಗಳಿಗೆ ಆಲ್ ಔಟ್ ಮಾಡಿ ಪಂದ್ಯವನ್ನು ಟೈ ಮಾಡಿಕೊಂಡರು.
ಇನ್ನು ಲಂಕಾ ಪರ ಬೌಲ್ ಮಾಡಿದ ಹಸರಂಗ ಮತ್ತು ಅಸಲಂಕಾ ತಲಾ 3ವಿಕೆಟ್ ಪಡೆದು ಮಿಂಚಿದರು. ಇನ್ನು ಯುವ ಆಲ್ ರೌಂಡರ್ ವೆಲ್ಲಲಿಗೆ 2 ವಿಕೆಟ್ ಪಡೆದು ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾದರು.