ಹಾರಾರೆ (ಜಿಂಬಾಬ್ವೆ): ನಾಯಕ ಶುಭ್ಮನ್ ಗಿಲ್ ಸಾರಥ್ಯದಲ್ಲಿ 5 ಪಂದ್ಯಗಳ ಟಿ 20 ಸರಣಿ ಇಂದಿನಿಂದ ಆರಂಭವಾಗಲಿದೆ. ಈಗಾಗಲೇ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದ ಶಿವಂ ದುಬೆ, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ ಈ ಮೂವರನ್ನು ಬದಲಾಯಿಸಿ ಜಿತೇಶ್ ಶರ್ಮ, ಸಾಯಿ ಸುದರ್ಶನ್, ಹರ್ಷಿತ್ ರಾಣಾಗೆ ಸ್ಥಾನ ನೀಡಲಾಗಿದೆ.
ಈ ಪಂದ್ಯ ಜಿಂಬಾಂಬೆಯ ಹರಾರೆ ಸ್ಪೋರ್ಟ್ಸ್ ಕ್ಲಬ್ ಸ್ಟೇಡಿಯಂ ನಲ್ಲಿ ಸಂಜೆ 4:30ಕ್ಕೆ ಶುರುವಾಗಲಿದೆ. ಈ ಸ್ಟೇಡಿಯಂನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ 20 ಓವರ್ ಗಳಲ್ಲಿ 156 ರನ್ ಗಳ ಸರಾಸರಿಯನ್ನು ಹೊಂದಿದೆ . ಇನ್ನೂ ಎರಡನೇ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಮಾಡುವ ತಂಡದ ಸಾರಾಸರಿ 140 ಇರುವುದರಿಂದ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.
ಇನ್ನೂ ತಂಡದ ಹನ್ನೊಂದರ ಬಳಗದಲ್ಲಿ ಯಾರೆಲ್ಲಾ ಸ್ಥಾನ ಪಡೆದುಕೊಳ್ಳುತ್ತಾರೆ ಎಂದು ನೋಡೋದಾದ್ರೆ ನಾಯಕ್ ಶುಭ್ಮನ್ ಗಿಲ್ ಜೊತೆಗೆ ಅಭಿಷೇಕ್ ಶರ್ಮ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ನಂತರ ರುತುರಾಜ್ ಗಾಯಕ್ವಾಡ್, ರಿಯನ್ ಪರಾಗ್, ರಿಂಕು ಸಿಂಗ್, ವಿಕೆಟ್ ಕೀಪರ್ ಆಗಿ ದೃವ್ ಜೂರೆಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ನೋಯಿ, ಅವೀಶ್ ಖಾನ್, ಮುಕೇಶ್ ಕುಮಾರ್, ಖಲೀಲ್ ಅಹಮದ್ ಗೆ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಿದೆ